Monday, December 29, 2014

..


ಹಿಂದುತ್ವವೆನೆ ಬಲಪಂಥೀಯ- ಜಾತ್ಯತೀತನೆನೆ ಎಡಪಂಥೀಯ
ಪ್ರಜಾಪ್ರಭುತ್ವದೆ ಎಡಬಲ ಸಮವು- ಅಂತ ನಮಗೆ ಪೂರ್ತಿ ಮರೆವು
ಎಡಬಲ ಭುಜಬಲ ದರ್ಶನದಿ- ಸವಕಲು ಮತದಾರನ ಒಲವು

ನಾನೊಬ್ಬ ಹಿಂದೂವಾದಿ. ಆದರೂ PK ಇಷ್ಟವಾಗಿದ್ದಾನೆ

PK ಅನ್ನೋ ಸಿನಿಮಾ ಬಿಡುಗಡೆಯಾಗಿದೆ. ಆಮೀರ್ ಖಾನ್ ಚಿತ್ರ ಅಂತ ಜನರೆಲ್ಲಾ ಮುಗಿಬಿದ್ದು ನೋಡ್ತಿದ್ದಾರೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೀತಿದೆ ಚಲನಚಿತ್ರ.

ಈ ಮಧ್ಯದಲ್ಲೊಂದು ಧರ್ಮದ ಕುರಿತ ಮಾರ್ಮಿಕ ಚರ್ಚೆ. ಇತರೆ ಧರ್ಮಗಳಿಗಿಂತ ಹೆಚ್ಚಾಗಿ ಹಿಂದೂ ಧಾರ್ಮಿಕ ಆಚರಣೆಗಳನ್ನ ಮಾತ್ರ ಅಲ್ಲಗೆಳೆಯಲಾಗಿದೆ, ಅವಹೇಳನಕಾರಿಯಾಗಿ ಬಿಂಬಿಸಿದ್ದಾರೆ, ಅನ್ನೋದು ಚರ್ಚೆಯ ಒಂದು ಮಗ್ಗುಲಾದ್ರೆ, ಪಾಕಿಸ್ತಾನಿ ಯುವಕ ಭಾರತೀಯ ಹಿಂದುವನ್ನು ಪ್ರೀತಿಸಿ ಮೋಸಮಾಡಿದ ಅಂದುಕೊಂಡಾತ  ಆಕೆಗೆ ಕೊನೆಗೆ ಸಿಕ್ಕಿಬಿಡೋದ್ರಿಂದ, ಇದು ಲವ್ ಜಿಹಾದ್-ಅನ್ನು ಬೆಂಬಲಿಸುತ್ತೆ ಅನ್ನೋದು ಚರ್ಚೆಯ ಇನ್ನೊಂದು ಮಗ್ಗುಲು. 

ಗದರ್- ಚಿತ್ರ ಬಂದಿತ್ತು  ವರ್ಷಗಳ ಹಿಂದೆ. ಹೀಗೇ ಮುಗಿಬಿದ್ದು ನೋಡಿದ್ರು ಜನ. ಖಾನ್ ಗಳ್ಯಾರೂ ನಾಯಕನಾಗಿರದ ಚಿತ್ರ. ಪಾಕಿಸ್ತಾನ ಮತ್ತು ಭಾರತದ ವಿಭಜನೆಯ ಸಮಯದ ರಕ್ತಕಣ್ಣೀರಿನ ಚಿತ್ರಣ. ಜೊತೆಯಲ್ಲಿ ಪಾಕಿಸ್ತಾನೀ ಯುವತಿಯನ್ನ ಭಾರತೀಯ ಸಿಖ್ ಯುವಕನೊಬ್ಬ ಮದುವೆಯಾಗುವ ಕಥೆ. ಇದಕ್ಕೆ ಯಾಕೆ ಪ್ರತಿಭಟನೆಗಳು ನಡೀಲಿಲ್ಲ? ಓಹ್! ಲವ್ ಜಿಹಾದ್ ಅಂದ್ರೆ ಹುಡುಗ ಮುಸ್ಲಿಮನಾಗಿರಬೇಕಲ್ವೇ? ಷಾರುಖ್ ಖಾನ್ ಗೌರಿಯನ್ನ ಮದುವೆಯಾದದ್ದೂ ಲವ್ ಜಿಹಾದೇನೆ ಹಂಗಾದ್ರೆ? ಆಮೀರ್ ಖಾನ್ ತನ್ನ ಮೊದಲ ಹೆಂಡತಿಗೆ ತಲಾಖ್ ನೀಡಿ ವರಿಸಿದ್ದು ಕಿರಣ್ ಎಂಬಾಕೆಯನ್ನ. ಹಾಗಾದ್ರೆ ಅದೂ ಜಿಹಾದ್ ಬಿಡಿ. ಐಶ್ವರ್ಯಳನ್ನ ನೋಡಿ. ಎಚ್ಚೆತ್ತುಕೊಂಡ್ಳು. ಕೊನೆಗಾಕೆ ಸಲ್ಮಾನ್ ಖಾನ್ ಎನ್ನುವ ಜಿಹಾದಿಯ ಬಲೆಯಿಂದ ಅರುಗಾದಳು ಪಾಪ. ಹೆಸರಿಸ್ತಾ ಹೋದರೆ ಇಂಥಾ ಸೆಲಿಬ್ರಿಟಿ ಜೋಡಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಮ್ಮೆ ಅಂತರ್ಜಾಲ ಬೆದಕಿ ನೋಡಿ. 

ನಾನಿಲ್ಲಿ ಲವ್ ಜಿಹಾದ್ ಒಂದು ವ್ರಣವಲ್ಲ ಅಂತ ಹೇಳಲು ಹೊರಟಿಲ್ಲ. ಲವ್ ಜಿಹಾದ್ ನ ಕೋನದಲ್ಲಿ PKಯ ಜಗ್ಗು- ಸರ್ಫಾರಾಜ್ ರ ಪ್ರೇಮಕಥೆಯನ್ಯಾಕೆ ನೋಡೋಣ ಅಂತ ಕೇಳ್ತಿದ್ದೇನೆ. ಹಾಗಾದಲ್ಲಿ ಮುಸ್ಲಿಮರೂ PK ವಿರುದ್ಧ ಕೂಗಬೇಕು ಬಿಡಿ. ಜಗ್ಗುವಿನ ಒಂದು ಕರೆಗಾಗಿ ಸರ್ಫಾರಾಜ್ ಯಾಕಾಗಿ ವರ್ಷಗಟ್ಟಲೆ ಹಪಹಪಿಸುತ್ತಾ ಕಾದ? ಈಗಾಗಲೇ ಆ ಸಿನಿಮಾ ನೋಡಿರುವಿರಾದರೆ, ಆ ಪ್ರೇಮ ಕಥೆ ನಿಮ್ಮ ಮನದಲ್ಲಿ ಆರ್ದ್ರ ಭಾವ ಮೂಡಿಸಲೇ ಇಲ್ಲವೇ? ಕೋಮು ದ್ವೇಶವುಕ್ಕಿ ಮೂಗು ಕೆಂಪಗಾಗಿ ಕಣ್ಣಿಗೆ ರಕ್ತ ನುಗ್ಗಿದಂತಾಗಲಿಲ್ಲ ಯಾಕೆ? 

ಇದಕ್ಕೆ ಮುಂಚೆಯೂ ಪಾಕಿಸ್ತಾನದ-ಕಂಡರಿಯದ ಯಾವುದೋ ಮೂಲೆಯಿಂದ-ಬೆದಕಿ ನೋಡಿದರೂ ಸಿಕ್ಕದ- "ಅಂತಃಕರಣವಿರುವವರು" ತೆರೆಯ ಮೇಲೆ ಪಾತ್ರವಾಗಿ ಬಂದೇ ಇಲ್ಲವೇ? ಅಥವಾ ಒಂದು ಕಾಲ್ಪನಿಕ ಪಾತ್ರ ಬರಲೇ ಬಾರದೇ? ಸಿನಿಮಾ ನೋಡಿ ನಾವು ಮುಸ್ಲಿಮರು ಅದೆಷ್ಟು ಒಳ್ಳೆಯವರು ನೋಡಿ ಅಂತಂದುಕೊಂಡರೇನಡ್ಡಿ? ಐತಿಹಾಸಿಕವಲ್ಲದ ಕಾಲ್ಪನಿಕ ಚಿತ್ರಕ್ಕಷ್ಟು ಪ್ರಾಮುಖ್ಯ ಬೇಕಾ? 

ಇನ್ನು ಧರ್ಮ ಜಿಜ್ಞಾಸೆಯ ವಿಚಾರ. ಓಹ್ ಮೈ ಗಾಡ್ ಎನ್ನುವ ಚಲನಚಿತ್ರ ಬಹಳಷ್ಟು ಯಶಸ್ವಿಯಾಗಿತ್ತು. ಅದರಲ್ಲಿಯೂ ಧಾರ್ಮಿಕ ವಿಧಿಗಳನ್ನು ಚರ್ಚಿಸಲಾಗಿತ್ತು. ದ್ಹೊಂಗಿ ಗುರುಗಳ, ಭಕ್ತರ ಭಯವನ್ನು Encash ಮಾಡಿಕೊಳ್ಳುವ ಹಿಂದೂ ಗುರುಗಳ ಪಾತ್ರವೂ ಇತ್ತು. PK ಯಲ್ಲಿ ಹಲವಾರು ಮಾತುಗಳು, ದೃಶ್ಯಗಳು ಕೂಡ ಇದೇ ಚಿತ್ರದ ಪುನರಾವರ್ತನೆ ಎನ್ನಿಸುವುದು ಖಂಡಿತಾ. ನಿರೂಪಣೆ ಬದಲಾಗಿದೆಯಷ್ಟೇ. ಓಹ್ ಮೈ ಗಾಡ್ ಮೆಚ್ಚುಗೆಗ್ಯಾಕೆ ಪಾತ್ರವಾಯ್ತು ಮತ್ತೆ? ಪಾತ್ರಧಾರಿಗಳು ಹಿಂದೂಗಳೆಂದಲ್ಲವಷ್ಟೇ? ಬುದ್ಧಿಜೀವಿಗಳ ಮಾತು ಒತ್ತಟ್ಟಿಗಿರಲಿ. ಅನ್ಯಾಯವನ್ನ ಖಂಡಿಸಲೇಬೇಕು ಹಿಂದೂಗಳು. ಇಲ್ಲದೇ ಹೋದಲ್ಲಿ ಜಿಹಾದ್ ಎಲ್ಲೆಲ್ಲೂ ತಾಂಡವವಾಡಿ ಹಿಂದುತ್ವವನ್ನೇ ಮುಗಿಸಿಹಾಕುವ ದಾರ್ಷ್ಯ ತೋರಲು ಹವಣಿಸೀತು ಎಚ್ಚರ! 

ಆದರೆ ಒಂದು ಉದಾತ್ತ ಉದ್ದೇಶವುಳ್ಳ ಸಿನಿಮಾವನ್ನು ಕೋಮು ತಾರತಮ್ಯ ಮಾಡಿದೆಯೆಂದು ಅಪಾದಿಸೋದು ಎಷ್ಟು ಸರಿ? ದಯಮಾಡಿ ಆ ಚಿತ್ರವನ್ನೊಮ್ಮೆ ನೋಡಿ ವಿಮರ್ಶಿಸಿಕೊಳ್ಳಿ. ದೊಡ್ಡ ಸಮಸ್ಯೆಯೊಂದನ್ನ ಮೆಲುವಾಗಿ ಪ್ರಶ್ನಿಸಹೊರಟಿದೆ PK. ಉತ್ತರಿಸುವ ದಾರ್ಷ್ಯ ಎಲ್ಲೂ ತೋರಿಲ್ಲ. ವಿಮರ್ಶೆಗೊಳಪಡದ ಯಾವ ಧರ್ಮವೂ ಇಲ್ಲ PKಯಲ್ಲಿ. ಬೇರೆಯವರು ಹೇಳೋದನ್ನ, ಕಮೆಂಟಿದ್ದನ್ನ ನೋಡಿ PK ನೋಡದಿದ್ದರೆ ಅದರ ಗ್ಲೋಬಲ್ ಕಾನ್ಸೆಪ್ಟ್ ನಿಂದ ವಂಚಿತರಾಗುತ್ತೀರ. ನೋಡಿದಲ್ಲಿ ನಿಮ್ಮೊಳಗೊಬ್ಬ PK ಕಂಡು ಒಳಮನಸ್ಸಿಗೆ ಎಂದೋ ಗೋಚರವಾದ ಪ್ರಶ್ನೆಗಳಿಗೆ ಉತ್ತರ ತಡಕಿಕೊಳ್ಳುತ್ತೀರೇನೋ. ಎಲ್ಲಾ ಪೂರ್ವಾಗ್ರಹ ಮರೆತು PKಯನ್ನೊಮ್ಮೆ ನೋಡಿ, ಅದರಲ್ಲೊಬ್ಬರಾಗಿ ಜೀವಿಸಿ ಬನ್ನಿ ಅಂತ ನನ್ನ ವಿವೇಚನೆಯುತ ಪ್ರಾರ್ಥನೆ.

Sunday, December 21, 2014

PK – Movie Review

He comes from a world which we don’t even know that it exists. He gets robbed off his only possession which could take him back home. Alone on a completely new land, he searches for God which people say could get his lost gadget back. The only bewilderment he nurtures on earth is existence of the creator, the belief that the people have in God as the only solver of their problems.

Like a new born child who has been dropped on earth in a grownup form, he struggles to adjust to ways of adulthood, adultery and contradicting religious beliefs. He explores ways to be heard by God only to leave him even more confused and feeling unheard. Every religion has its own customs, own ways to have proven for enlightenment or problem solving. Every Masiha, or every Godman have their own partial judgments about other religions.

PK sees his gadget with a principal antagonist Tapaswi Maharaj, a religious guru. He tries to recover it by claiming that it is his property but his try goes in vain. He then meets Jagatjanani, a media journalist whom he trusts and narrates his whole story to. She helps him come to media to get his gadget. During his search with his child like innocence he invokes questioning

and reasoning in India about God.

This movie doesn’t negate beliefs but questions them sensibly. It doesn’t strike a wrong chord for religious sentiments but asks them to relook for a firmer base. Wrong number concept is awesome and that is where the viewer connects so much with the movie.

This’s a movie with humor and black humor both. This high dose emotion intensive comic drama is sure to satiate all Amir fan’s hunger for something new, something sensible and a reason for rejoice. After a long gap director Rajkumar Hirani has made a grand comeback through this flick. By the time the movie ends, you will strongly feel that you have lived the movie than have merely watched it.


Happy PK watching!

Monday, December 1, 2014

Half-Girlfriend - Chetan Bhagat : A Review

It’s already been months of its release. Compared to all the other ones, this is his only novel which I’ve laid my hands on, so late indeed.

Bhagat has mastered the skills of keeping young readers hooked on to his story, irrespective of what he wants to convey from it. I should say, he has proved it again.

It all starts with Chetan Bhagat in Pune meeting a heart broke young man Madhav giving him his dead half-girlfriend(Riya)’s journal to read. Out of human tendency, the author reads the whole of her journal and then asks Madhav to tell him his version of story.

Well, I must admit there are flaws in narration. In the very beginning Madhav persuading Bhagat to read his girlfriend’s journal just because that guy and Riya had read Chetan’s novel as a part of unconventional English learning, itself strikes a wrong chord. Added to it, Madhav admits that the journal is his priceless possession since he got it after 2 years of their separation; But yet doesn’t want to read it since he wanted to get over her. Madhav has the personal journal of a girl who would withdraw everytime he tried to make her talk about her past. A guy who tried to decode her every expression during each moment together, a guy who has clinged on to past for 2 years thinking about Riya everyday, the only love of his life, yet not curious of what she has in her journal, given any reason, doesn’t seem realistic.


What makes Riya forget her personal journal in the remotest corner of her condo(to go unnoticed for more than 2 years) even after scribbling in it the very day before she cuts off with the world leaving absolute no clues to anyone, but this most evident one, is another loose link in the story.

Apart from that, this novel doesn’t disappoint you. The way Madhav deals with getting grants to his rural remote school from Gates foundation is worth knowing and inspirational as well. Its an eye opener about how vital English-This foreign language is, despite all odds about brainy people being overlooked just for their lack of sound knowledge of English. 

The love story and Madhav trying to make a meaning from their half-baked relationship and all the confusion around it is what that holds the reader till end.

No wonder if you skip parts of it during last chapter in the eagerness to know what happened next, it’s all reasonable!!
(With a wink, lest I did the same!!) 

Saturday, September 20, 2014

ಪ್ಯಾಪಿಯೋನ್ ೩ - ಬಾಜಿ - ಪ್ರದೀಪ್ ಕೆಂಜಿಗೆ

ಅವತ್ತು ತೇಜಸ್ವಿಯವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕೀಟಗಳ ಛಾಯಾಚಿತ್ರ ಪ್ರದರ್ಶನದ ಕೊನೆಯ ದಿನ. "ಪ್ಯಾಪಿಯೋನ್ ೩–ಬಾಜಿ"–ಯ ಬಿಡುಗಡೆ ಕೂಡ. ಅಲ್ಲಿಗೇ ಮುಕ್ತಾಯವೇನೊ ಅಂದುಕೊಂಡಿದ್ದ ಕಥೆಯ ಮೂರನೇ ಭಾಗ ಬರುತ್ತದೆಂದಾಗ ಕುತೂಹಲದಿಂದ ಅವತ್ತೇ ಹೋಗಿ ಕೊಳ್ಳೋಣವೆಂದು ನಮ್ಮೆಜಮಾನರನ್ನು ಪುಸಲಾಯಿಸಿದೆ.. ನಗೆಯ ಉತ್ತರ ಸರಿಯೆಂದು ಸೂಚಿಸಿತು. ಅವತ್ತು ಮರೆಯಲಾಗದ ದಿನ.. ಅದ್ಭುತ ಯಾನ ಬರೆದ, ತೇಜಸ್ವಿಯವರ ಜೊತೆ ಮಿಲೆನಿಯುಂನ ವಿಸ್ಮಯ ಸರಣಿಯನ್ನು ಹೊರತಂದ ಪ್ರದೀಪ್ ಕೆಂಜಿಗೆಯವರನ್ನು ಭೇಟಿ ಮಾಡಿದೆ.

ಜೈಲುಹಕ್ಕಿ ಪ್ಯಾಪಿಯ ಬಿಡುಗಡೆಯ ನಂತರದ ಕಥೆ ಈ ಪುಸ್ತಕ. ಬಿಡುಗಡೆಯ ದಿನ ಕಾಣಲು ಕಾತರಿಸಿದ್ದ ಪ್ಯಾಪಿಯೋನ್ (ಪ್ಯಾಪಿಲ್ಲಾನ್) ಹೊರಬಂದು ಮಕೋಪಿಯಾ ಚಿನ್ನದ ಗಣಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಆದರೆ ಅಷ್ಟೇನೂ ಬಿಗಿ ಭದ್ರತೆಯಿಲ್ಲದ ಗಣಿಯ ಚಿನ್ನದ ಗಟ್ಟಿಗಳಿಗೆ ಮಾರುಹೋಗುತ್ತಾನೆ. ಬೆಂಬಿಡದೇ ಕಾಡುವ ಸೇಡಿನ ಕಿಚ್ಚನ್ನಾರಿಸಲು ಸುಲಭ ಲಾಭ ಸಂಪಾದನೆಯ ಮಾರ್ಗ ನಿರಂತರವಾಗಿ ಶೋಧಿಸುತ್ತಾ ಜೂಜುಕೋರರ ಸಂಗಡಿಗನಾಗುತ್ತಾನೆ, ಬ್ಯಾಂಕ್ ದರೋಡೆ, ಚಿನ್ನದಂಗಡಿಯ ಲೂಟಿಯ ಯೋಜನೆಯಲ್ಲಿ ಭಾಗಿಯಾಗುತ್ತಾನೆ.

ನಿಧಿ ಶೋಧಕರ ಜೂಜಿನ ಧಾಂಧಲೆ ಮೈನವಿರೆಳುವಂತಿದೆ. ಗೆದ್ದವನನ್ನು ಕತ್ತಲಲ್ಲಿ ಮುಗಿಸಲು ಕಾದು ಕೂತ ಬಲಿಷ್ಠರು. ಸತ್ತರೆಂದು ಮನೆಯವರೆಗೂ ಸುದ್ದಿ ತಿಳಿಯುವುದೇ ವಾರಗಟ್ಟಲೆ ಆದಮೇಲೆ. ಇನ್ನೆಲ್ಲಿಯ ಪೋಲೀಸು? ಎಲ್ಲೆಲ್ಲಿಯೂ ಸಾಫಲ್ಯ ಕೈಕೊಡುತ್ತದೆ. ಇನ್ನೇನು ರಾಶಿ ಸಂಪತ್ತು ಕೈಸೇರಿತೆನ್ನುವಾಗ ವಿಧಿ ಸೋಲಿನ ಸಂಚು ಹೂಡುತ್ತದೆ. ಭೂಗತ ಚಟುವಟಿಕೆಗಳು ಯಾವುವೂ ಗೆಲ್ಲದೆ ಕೊನೆಗೆ ವೆನಿಜುವಲಾ ಕಂಪನಿಯೊಂದಕ್ಕೆ ತೈಲ ನಿಕ್ಷೇಪ ಶೋಧಕರ ಮುಂದಾಳಾಗುತ್ತಾನೆ. ಅಲ್ಲಿಂದ ಮುಂದೆ ಸತ್ಪ್ರಜೆಯಾಗಿ ಗೌರವಯುತ ಬದುಕು ಕಂಡುಕೊಳ್ಳುತ್ತಾನೆ. ದೇಶದ ಶ್ರೀಮಂತರ ಪಟ್ಟಿಯಲ್ಲಿ ಅವನ ಹೆಸರು ಸೇರಲ್ಪಡುತ್ತದೆ. ಯಾವ ಫ್ರೆಂಚ್ ಸರ್ಕಾರ ಆಜೀವ ನಿಷೇಧ ವಿಧಿಸಿತ್ತೋ ಅದೇ ಸರ್ಕಾರ ಅವನ ಮೇಲಿನ ನಿರ್ಬಂಧ ತೆಗೆದುಹಾಕುತ್ತದೆ.

ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಭರ್ತಿ 37 ವರ್ಷಗಳು ಕಳೆದಿರುತ್ತವೆ. ಪ್ರತಿ ಅಧ್ಯಾಯವೂ ಮುಗಿಯದೆ ವಿರಾಮ ಕೊಡುವುದು ಓದುಗರಿಗೆ ಕಷ್ಟ. ಪ್ರತಿ ಘಟನೆಯೂ ಪ್ಯಾಪಿಯ ಬಾಳಲ್ಲೊಂದು ಕಾಣದ ಸಂಕ್ರಮಣ. ಆದರೆ ಕೊಂಚವೂ ಎದೆಗುಂದದೆ-ತನ್ನ ವಿಧಿಯನ್ನು ವೃಥಾ ಹಳಿಯದೇ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳುವ ಪ್ಯಾಪಿ ನಮ್ಮ ಮನದಲ್ಲೂ ಗೌರವ ಮೂಡಿಸುತ್ತಾನೆ. ದಿನ-ರಾತ್ರಿ ಲೆಕ್ಕವಿಡದೆ ಶ್ರದ್ಧೆ ಸುರಿದು ಶ್ರಮವಹಿಸಿ ಹೋಟೆಲ್ಗಳ ಮಾಲಿಕನಾಗುವ ಪ್ಯಾಪಿ ಓದುಗನ ಸ್ಫೂರ್ತಿಯಾಗುತ್ತಾನೆ. ಆತನ ಬಾಳಿನಲ್ಲಿ ಬರುವ ಹೆಂಗಳೆಯರೆಲ್ಲರೂ ತಮ್ಮ ಪ್ರತಿಫಲ ಅರಸದ ಪ್ರೀತಿ, ಮಾತುಗಳಿಂದ ಆತನ ಮನಸ್ಥಿತಿ, ಸ್ಥಿಮಿತ ತಪ್ಪದಂತೆ ಮುನ್ನಡೆಸುವ ಮಾರ್ಗದರ್ಶಿಗಳಾಗುತ್ತಾರೆ.

ಪ್ಯಾಪಿಯ ಮಾತುಗಳಲ್ಲಿ—ಇಂದು ಇದೇ ಆತ್ಮಕಥೆಯನ್ನು ಮುಗಿಸುವ ಹೊತ್ತಿಗೆ ನನಗನ್ನಿಸುತ್ತಿದೆ ಅದು ದುರ್ದಷೆ ಅಲ್ಲ, ಕಠಿಣವಾದ ಅದೃಷ್ಟ ಪರೀಕ್ಷೆ. ಜೀವಕೋಟಿಗಳ ಪ್ರತಿನಿತ್ಯದ ಜೀವನಸಂಗ್ರಾಮದಲ್ಲಿ ನನ್ನದೂ ಒಂದು ಹೋರಾಟ. ವಿಶ್ವವೆಂಬ ಚದುರಂಗದಲ್ಲಿ ನನ್ನದೂ ಒಂದು ಆಟ. ಅದೃಷ್ಟ ಚೆನ್ನಾಗಿತ್ತು. ಉರುಳಿಸಿದ ದಾಳ, ನಡೆಸಿದ ನಡೆಗಳು ಫಲಕೊಟ್ಟವು. ನಾನು ಪರೀಕ್ಷೆಯಲ್ಲಿ ಗೆದ್ದು ಬಂದೆ ಅಷ್ಟೇ!


((ಇದು ಈ ಸರಣಿಯ ಮೊದಲೆರೆಡು ಪುಸ್ತಕಗಳ ಬಗೆಗಿನ ನನ್ನ ನೋಟ. 
http://suprabhasulthanimatt.blogspot.in/2013/03/blog-post_21.html))


Friday, September 12, 2014

ವೀಣೆ ಮಿಡಿವ ಕೈ

ಚಿತ್ರ ಕೃಪೆ :
http://www.mayurveena.com
ಹಸಿರ ತೋಟ ಉಲಿವ ಶಬ್ಧ ಒಂದೆ ಸಿರಿಯ ಬಯಲಲಿ
ವೀಣೆ ಹಿಡಿದು ದೇವಿಯಂತೆ ಬಂದೆ ನೀನು ಬಾಳಲಿ

ತಟಸ್ಥಗಿವಿಯ ಮರುಳು ಮನಕೆ ವೀಣೆ ಸ್ವರವು ಕೇಳಿತು
ಕಲೆಯ ಕಲ್ಪ ಜಡದ ಕಿವಿಯೊಳಾಲಾಪವ ಧ್ವನಿಸಿತು

ಎಲ್ಲಿ ಹುದುಗೆ ಬಿಡದೆ ಭಾವ ಕಂಪನಗಳು ಏಳಲು
ದಣಿವು ಜಾರಿ ಸ್ವನವ ಹೀರಿ ಮಧುರ ರಾಗದುಂಬಲು

ತೇನೆಹಕ್ಕಿ ಗಾನ ಕೇಳೆ  ಮೆಲ್ಲನದುವು ಉಲಿಯಲು
ಅಲ್ಲೆ ಕಾಂಬ ಹಸುವದೊಂದು ಕೊರಳ ಗಂಟೆ ಧ್ವನಿಸಲು

ನಿನ್ನ ಬೆರಳ ಮೋಡಿ ಮತ್ತೆ ವೀಣೆಯಲ್ಲಿ ಸ್ಫುರಿಸಲು
ಸುಯ್ದು ಸುಳಿವ ಗಾಳಿ ಕೂಡ ಕೇಳಲದನು ನಿಲ್ಲಲು

ಆಲಾಪದಿ ಮುಳುಗೇಳೆ ಭಕ್ತಿ ಚಿಮ್ಮುವಂದದಿ
ಷಡ್ಜಕಿಳಿಯುವಲ್ಲಿ ಅರೆರೆ! ದೇವ ಕಂಡ ತಾನದಿ!

ಧನ್ಯನೆಂದೆ ಮನದೊಳೆಲ್ಲ ಆರ್ದ್ರ ಭಾವ ತುಂಬಿದೆ
ಕೈಯ್ಯ ಹಿಡಿದು ಗಾನದೇವನನ್ನೆ ಚಣದಿ ತೋರಿದೆ!

(ಗೋರೂರು ರಾಮಸ್ವಾಮಯ್ಯಂಗಾರರ "ಊರ್ವಶಿ"ಯಿಂದ ಪ್ರೇರಿತ)

Wednesday, August 6, 2014

ಯಾನ - ಚಿಂತನೆಗಳ ಅನುರಣನೆ

ಭೂಮ್ಯಾಕಾಶಗಳ ವಿಸ್ತಾರವನ್ನು ಭಾವದ ನಿಲುಕಿಗೆ ತಂದು ವೈಜ್ಞಾನಿಕ ವಿವರಣೆ ಕೊಡುತ್ತಲೇ, ಪಾತ್ರಗಳ ಮನಮಂಥನವನ್ನು ಸಮರ್ಥವಾಗಿ ತೆರೆದಿಡುವ ಭಾಷೆ ಈ ಕಾದಂಬರಿಯದು. ಯಾವುದೇ ವಿಷಯವೆತ್ತಿಕೊಂಡರೂ ಪೂರಕ ಅಧ್ಯಯನ ಮಾಡಿ ಬರೆಯುವ ಭೈರಪ್ಪನವರು ಐಐಎಸ್ ಸಿ - ಭಾರತೀಯ ವಿಜ್ಞಾನ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾಗಿನ ಸಂದರ್ಭವನ್ನು ಬಳಸಿಕೊಂಡು ಗಗನಯಾತ್ರೆ, ಅಂತರಿಕ್ಷಯಾನದ ಬಗೆಗೆಲ್ಲ ಮಾಹಿತಿ ಕಲೆಹಾಕಿದ್ದಾರೆ. ಅವರೇ ಹೇಳುವಂತೆ, ವಾಯುನೆಲೆ ಅಧಿಕಾರಿಗಳ ಒಡನಾಟದಿಂದ ವಾಯುಸೇನೆ ಮತ್ತದರ ಕಾರ್ಯವೈಖರಿಯ ಬಗ್ಗೆ ವಿಸ್ತಾರ ಮಾಹಿತಿ ಪಡೆದಿದ್ದಾರೆ. ವೈಜ್ಞಾನಿಕ ವಿವರಣೆಯನ್ನೆಲ್ಲ ಅಜೀರ್ಣವಾಗುವಂತೆ ಬರೆಯದೆ ಬೇಕಾದಲ್ಲಿ ಹೂರಣವಾಗಿ ಬಳಸಿದ್ದಾರೆ. ತಮ್ಮ  ನೆಚ್ಚಿನ ತತ್ವಶಾಸ್ತ್ರವನ್ನು ಸಂಬಂಧಗಳ ಮನಮಂಥನ, ಅವುಗಳ ಸ್ವರೂಪ, ವ್ಯಾಪ್ತಿ, ಸುಪ್ತ ಮನದ ಅಭಿವ್ಯಕ್ತಿಗಳಲ್ಲಿ ಕಥೆಯೊಳಗೆ ಬೆರೆತು ಹೋಗುವಂತೆ ಮೂಡಿಸಿದ್ದಾರೆ.

ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರದೆಡೆಗೆ ಕಳುಹಿಸುವ ಅಂತರಿಕ್ಷಯಾನವೇ ಕಥಾವಸ್ತು.

ಸಂಬಂಧದ ಅಂಟು-ನಂಟು ಎಲ್ಲಿಯವರೆಗೆ? ಯಾವ ಎಳೆತ ಮನಃಬಂಧಕ್ಕೆ ಕಾರಣ? ಅದರ ಮಿತಿ ಏನು? ಏಕರೂಪಿಯಾಗಿ ಎಷ್ಟು ಸಮಯ ಅದು ನಮ್ಮನ್ನು ಬಾಧಿಸಬಲ್ಲದು? ನಾವು ಒಳಪಡುವ ನೈತಿಕತೆಗೆ ಸೌರಮಂಡಲದ ಚೌಕಟ್ಟಿದೆಯಾ? ಅದರಾಚೆಗಿನ ಬಾಧ್ಯತೆಗಳೇನು? ಸೂರ್ಯನೇ ನಮ್ಮ ಆಲೋಚನೆಗಳ ಆಕರರೂಪಿಯೇ? ನಭೋಮಂಡಲದಾಚೆ ಸಾಗುವಾಗ ಮನದ ಸುಪ್ತ ದುಗುಡಗಳಾವು? ಆಧ್ಯಾತ್ಮದಿಂದಲೋ ಕೆಲಸದಿಂದಲೋ ಈ ಎಲ್ಲ ತುಮುಲಗಳನ್ನು ದೂರವಿರಿಸಲು ಸಾಧ್ಯವೇ?- ಈ ಎಲ್ಲ ಆಯಾಮಗಳನ್ನು ತಡಕುತ್ತ ಸಾಗುತ್ತದೆ ಯಾನ..

ಒಂಟಿತನದ ಸವಾಲುಗಳು, ಪಾತ್ರಗಳು ಅದನ್ನು ಬಗೆಹರಿಸಿಕೊಳ್ಳಲು ಹುಡುಕುವ ದಾರಿಗಳು, ಮತ್ತೂ ಅಂತರ್ಮುಖಿಗಳನ್ನಾಗಿ ಮಾಡುತ್ತ, ಹೊಸತನ್ನು ಕಲಿಯುತ್ತ, ತಮ್ಮನ್ನು ತಾವೇ ಕಂಡುಕೊಳ್ಳುವ ಪ್ರಯತ್ನವನ್ನು ಇನ್ನೂ ತೀವ್ರವಾಗಿಸುತ್ತದೆ ಯಾನ.

ಭೈರಪ್ಪನವರ ಚಾರ್ ಧಾಮ್ ಯಾತ್ರೆಯ ಅನುಭವವೂ ಇಲ್ಲಿ ಪಾತ್ರವೊಂದರ ಸನ್ನಿವೇಶವಾಗಿ ಮೂಡಿಬಂದಿದೆ. ಅವರ ಆತ್ಮಕಥೆ 'ಭಿತ್ತಿ' ಓದಿದ್ದರೂ ಕಾದಂಬರಿಯಾದ್ದರಿಂದಲೋ ಏನೋ ಯಾನದಲ್ಲಿಯ ಹಿಮಾಯಲಯದ ವರ್ಣನೆಯೇ ಮನಮುಟ್ಟಿತು.

ಯಾನದ ವಸ್ತುವಿನ ಬಗ್ಗೆ ಓದಿ ಇದು ವೈಜ್ಞಾನಿಕ ಕಾದಂಬರಿಯೆಂದುಕೊಂಡೆ. ಆದರೆ ಬರಿಯ ರಂಜನೆಯಾಗಿ ಉಳಿಯದೆ, ಬರಿಯ ವಿಜ್ಞಾನವೂ ತುಂಬಿರದೆ ಮನೋವಿಜ್ಞಾನ, ತತ್ವ, ಆಧ್ಯಾತ್ಮದ  ಹೊಳಹುಗಳಲ್ಲಿ ಹರಿದು ಬೇರೆಯದೇ ಸ್ತರದಲ್ಲಿ ನಿಲ್ಲುತ್ತದೆ ಯಾನ.

ನನ್ನ ಯಾನ ೨ನೇ ಮುದ್ರಣದ್ದು. ನಿಮ್ಮದು?..

Wednesday, July 30, 2014

ಮೊಬೈಲ್ ಪುರಾಣ!

ಬಂದು ಬಿಟ್ಟೆ ಮೊಬೈಲ್ ಬಿಟ್ಟೆ
ಮನೆಯಲದಾವ ಸಂದಿಯಲಿದೆಯೋ
ಮರೆತಳು ಅಂತ ಅಳುತ್ತಲಿದೆಯೋ

ಛೆ ಛೆ ಎಂಥ ಮರೆವೆಯದು
ಮಾತಾಡಲಾಗದು ಮೆಸೇಜ್ ಕುಟ್ಟಲಾಗದು
ಕೈಲದು ಕಾಣದೆ ಬೇಸರವಿಹುದು

ಯಾರ ಗೋಡೆಗೆ ಯಾರು ಗೀಚಿದರೋ
ಯಾರೆಷ್ಟೆಷ್ಟು ಲೈಕು ಕುಟ್ಟಿದರೋ
ಯಾವೆಲ್ಲ ಕಥೆ-ಕವನ ಮಿಸ್ಸಾಗಿ ಬಿಟ್ಟವೋ

ಎಷ್ಟು ಸ್ನೇಹಿತರು ಮೆಸ್ಸೇಜು ಅಟ್ಟಿದರೋ
ಎಷ್ಟು ಕ್ಯಾಂಡಿ ರಿಕ್ವೆಸ್ಟ್ ಉಳಿದವೊ
ಒಂದೆ ದಿನಕೇಕಿಷ್ಟು ಬೇಸರ
ಕೇಳಿಕೊಂಡರೆನಗೆ ಸಿಗದಲ್ಲ ಉತ್ತರ !!!

Monday, June 30, 2014

ಒಗ್ಗರಣೆ : ಮನದಾಳಕ್ಕಿಳಿದ ಘಮ

ಒಗ್ಗರಣೆ ಸಿನಿಮಾ ನೋಡಿದ ನನ್ನ ಸ್ನೇಹಿತರೆಲ್ಲರೂ ಈ ಸಿನಿಮಾ ನೋಡದೇ ಬಿಡಬೇಡೆಂದು ಹೇಳಿದವರೇ. ಪ್ರಕಾಶ್ ರಾಜ್ ಮುಖ್ಯಭೂಮಿಕೆಯಲ್ಲಿ ಅಂದ ಮೇಲೆ ವಿಮರ್ಶೆ ಓದದೇ ಸಿನಿಮಾ ನೋಡಿದಾಗಲೇ ಚಂದವೆಂದು, "ಚೆನ್ನಾಗಿದೆ; ಹೋಗು" ಅಂದ ಕೂಡಲೇ ನೋಡುವ ಮನಸ್ಸು ಮಾಡಿದೆ. ಮನಸ್ಸು ಮಾಡಿದಾಕ್ಷಣ ಮುಗಿಯಿತೇ? ಒಂದು ಭಾನುವಾರ ಮಗನ ಆಯುಷ್ಕರ್ಮ; ಇನ್ನೊಂದು ಭಾನುವಾರ ಅವನ ಕಿವಿ ಚುಚ್ಚಿಸುವ ಶಾಸ್ತ್ರ. ಎರಡೂ ರಜೆಗಳು ಅವನ "ಹೀಗ್ಯಾಕೆ ಮಾಡಿದಿರಿ....?!!"ಅನ್ನುವ ಅಳು ಸಮಾಧಾನಿಸಿ ಮರೆಸುವುದರಲ್ಲೇ ಕಳೆದು ಹೋಯ್ತು. 

ಮೂರು ವಾರಗಳಿಂದ ಕಾದು ಕೊನೆಗೂ ಒಗ್ಗರಣೆಯನ್ನು ನೋಡಿದಾಗ ಸಾರ್ಥಕ್ಯಕ್ಕಿಂತ ಹೆಚ್ಚಾಗಿ ಖುಷಿ ಆಗಿತ್ತು. ಕಥಾಹಂದರ ನಿರೂಪಣೆಯಲ್ಲಿನ ತಾಜಾತನ ಮನಕ್ಕೆ ಮುದ ನೀಡುವಂತಿದೆ. ಪ್ರಕಾಶ್ ರಾಜ್ ರ ನಿರ್ದೇಶನ ಯಾವ ಪಳಗಿದ ನಿರ್ದೇಶಕರಿಗಿಂತಲೂ ಕಡಿಮೆಯಿಲ್ಲ. ಹುಡುಕಬೇಕೆಂದರೂ ಒಂದೂ ಜಾಳು ಕೊನೆ ಇಲ್ಲ ಚಿತ್ರಕಥೆ- ನಿರ್ದೇಶನದಲ್ಲಿ. ಕಾಯ್ಕಿಣಿಯವರ ಸಾಲುಗಳು- ಇಳಯರಾಜರ ಸಂಗೀತ, ಚಿತ್ರಕಥೆಯಲ್ಲಿ ಬೆರೆತು ಹೋಗುತ್ತವೆ.

((ಕಥೆಯ ಎಳೆ :
ಒಂದು ರಾಂಗ್ ಫೋನ್ ನಿಂದ ಪುರಾತತ್ವ ಇಲಾಖೆಯ ನೌಕರ ಕಾಳಿದಾಸ (ಪ್ರಕಾಶ್ ರಾಜ್) ಮತ್ತು ಧ್ವನಿ ಕಲಾವಿದೆ ಗೌರಿ (ಸ್ನೇಹ) ಮಧ್ಯೆ ಪರಿಚಯ ಬೆಳೆಯುತ್ತದೆ. ಪರಿಚಯ ಸ್ನೇಹವಾಗಿ ಪ್ರೇಮ ನಿವೇದನೆಯವರೆಗೆ ಬರುವಷ್ಟರಲ್ಲಿ ಕೀಳಿರಿಮೆಯ ಕಾರಣ ಭೇಟಿಯಾಗಲು ಕಾಳಿದಾಸ ತನ್ನ ಸೋದರಳಿಯ ನವೀನ್ ನನ್ನು ಕಳಿಸಿದರೆ, ಮೇಘನಾಳನ್ನು ಕಳಿಸುತ್ತಾಳೆ ಗೌರಿ. ))

ಗೌರಿ ತನ್ನಮ್ಮನ ಅಡುಗೆಯನ್ನು ನೆನೆಸಿಕೊಂಡು ಇದ್ದಕ್ಕಿದ್ದಂತೇ ಅಳಲು ತೊಡಗಿದಾಗ ಎಂದಿಗೂ ಅಂಥಾ ಸನ್ನಿವೇಶ ಇದಿರುಗೊಳ್ಳದ ಕಾಳಿದಾಸ್ ಹೆದರಿ ಕೈಯ್ಯಿಂದ ಫೋನ್ ಕೊಡವಿ ಕೂತುಬಿಡುವಾಗ, ಆದಿವಾಸಿ ಜಕ್ಕಯ್ಯ ಕಾಳಿದಾಸನಿಗೆ ಒದಗಬಹುದಾದ ತೊಂದರೆ ಮನಗಂಡು ಮಾತೇ ಆಡದೆ ತನ್ನ ಮಗ-ಫ್ಯಾಕ್ಟರಿಯವರ ಜೊತೆ ಹೋಗಿಬಿಡುವಾಗಿನ ಬೇಸರ- ತುಮುಲ,  ಎರಡನೇ ಮಹಾಯುದ್ಧದ ಪ್ರಸಂಗ ವಿವರಿಸುತ್ತಾ ಫ್ರೆಂಚ್ ಮಹಿಳೆ ಜುವಾನ್ - ಆಕೆಯ ಪ್ರಿಯತಮ ಆಲ್ಬರ್ಟ್ ನ ಕಥೆ ಹೇಳುವಾಗಿನ ಧ್ವನಿಯಲ್ಲಿನ ಆ ತೂಕ, ಅಡುಗೆ ಭಟ್ಟನ ಮೇಲೆ ವಿನಾಕಾರಣ ಸಿಡುಕಿ ಮನೆಯಿಂದ ಹೊರಹೋಗೆಂದು ಕೂಗಿ ಕೊನೆಗೆ ತಾನೇ ದಿನಗಟ್ಟಲೆ ಮನೆಯಿಂದ ದೂರವುಳಿದು ಬಿಡುವ ಕಾಳಿದಾಸ ನಲ್ಲಿನ ಪ್ರಕಾಶ್ ರಾಜ್ ರ ನಿರಾಡಂಬರ ಅಭಿನಯ ಎಂದಿಗಿಂತಲೂ ಆಪ್ಯಾಯವೆನಿಸುತ್ತದೆ. 

ಸಂಭಾಷಣೆಗಳ ಕಚಗುಳಿಯಿಡುತ್ತಲೇ ಎಲ್ಲಾ ಆಯಾಮಗಳಲ್ಲೂ ತೆರೆದುಕೊಳ್ಳುತ್ತದೆ ಕಥೆ. ಎಲ್ಲಿಯೂ ಅತಿರೇಕವೆನಿಸುವ ತಿರುವುಗಳಿಲ್ಲ. ಮಧ್ಯದಲ್ಲಿ ನವೀನ್ - ಮೇಘನಳ ಯುವ ಪ್ರೇಮದ ಹರವಿನಲ್ಲಿ ಆಧುನಿಕತೆಯಿದೆ; ಹುಡುಗಾಟಿಕೆಯಿದೆ. ಕಾಳಿದಾಸ-ಗೌರಿಯ ಪ್ರೇಮದ ವಾಸ್ತವಿಕತೆ ಮನ ಮುಟ್ಟುವಂತಿದೆ. ಇವರಿಬ್ಬರ ಊಟದೆಡೆಗಿನ ಅಭಿರುಚಿ ನೋಡುಗರ ಅಭಿರುಚಿ ಸುಧಾರಿಸುವಂತಿದೆ. 

ವಿ.ಸೂ: ಸಿನಿಮಾಕ್ಕೆ ಮೊದಲು ಚೆನ್ನಾಗಿ ಹೊಟ್ಟೆ ತುಂಬಿಸಿಕೊಂಡು ಹೊರಡಿ. ಮಧ್ಯಂತರದ ವರೆಗಾದರೂ ಸಿನಿಮಾ ನೋಡಿಯೂ ಬಾಯಲ್ಲಿ ನೀರೂರಿಸದೆ ಇರಬಲ್ಲಿರೇನೋ!!! 

Thursday, May 8, 2014

Story of Punyakoti, the cow - (Meaning Crores of virtues)

Out of the blue, I was stuck with an old tune for the whole day. It made me Google for the folklore's complete lyrics. I was astounded that I was moved by it the same way when my mom had sung it to me when I was a kid. I googled for its English version and couldn't find a very convincing one. 

Story of Punyakoti is an all time favorite among Kannadigas and is renowned to bring a positive change in the minds of people who listen to it. 

I've tried to trans-narrate its story from the folklore.(Unknown author timed around 1800 AD).


There was a dense forest where a cattleman lived with a whole big herd of cows. One day Kalinga, the cattleman was playing his flute beneath a young mango tree near his cattle shed. He dearly called his cattle to draw milk. After all the cows siphoned their milk to fill his big pot, they walked graciously into the forest greens to graze. The poet says that it looked like a huge cloud gliding the skies when the herd moved. The cattle fed on the greenest grass in midst of flowered plants in the valley. 

By evening they started back for their shelter. Near a tall rock within the thick forest, there lived an old tiger who was very hungry. When the herd reached the rock, tiger roared and jumped on them. Cows ran for their life and tiger couldn't chase them too far. 

Punyakoti was the only cow who was late to return to its shelter. It was thinking of feeding its hungry calf and didn't notice the tiger waiting for a prey behind the rock. Arbhuta, the tiger jumped in front, was very happy that he finally got his meal and roared that he will tear her immediately and feast on her. Punyakoti gathered courage quickly and requested him to grant permission to go to its calf to feed him milk for one last time. 

Arbhuta laughed aloud and asked if she believes he is a fool;Since letting his prey go is as good as setting his prey free. But the cow promised on mother earth that she will return to him once she fed her son. The tiger then let her go. 

Punyakoti came to the cow shed, fed her little one. After he was full, she told about the incident in forest and her decision to go to the tiger as promised. Realizing that it would be the last time they are together, the calf wept and asked her to stay. For he wouldn't know whom to go when hungry, for he doesn't know whom to be with, for he wouldn't have his mother to sleep next to, for he doesn't know who would guide him in life. Other cows also told her not to go back to the cruel tiger.

Punyakoti still persists on her promise and tells that Truth is God to her. As she has promised the tiger, there is no turning back. She pleads her sisters and elder cows in the herd to treat her calf kindly. She asks them not to jab him or hit him if he comes near them; requests them to be nice to her soon to be orphan calf. 

For one last time Punyakoti hugs her son, for he is an orphan now, and their time of being together is over.

Arbhuta is all hungry and frustrated since he let his prey runaway. He would be in no hope of her returning to him. The cow then comes to the tiger's cave and offers herself to him. She says that now she has bid goodbye to her son and is prepared to be fed to flesh.

The tiger is taken aback by her talk and thinks that he will be cursed by God if he feeds on such a truthful cow. He tells her that it would be better for him to die of hunger than to eat Punyakoti who he feels like his sister. The cow is then astonished and asks him to eat her and satiate his hunger. Arbhuta is deeply moved. With tears in his eyes, he salutes to the God and Jumps off the sharp cliff and dies.


Let the story sink in, and then decide what shakes you, The cow's truthful bravery, or the love of a calf towards his mother, or the character transformation of the tiger.

Up to you to pass it on further if the story touches you.

Thursday, April 24, 2014

Bol - the movie (2011)

Of-late, no other movie has touched the way this one has. 

It is a Pakistani movie by Shoaib Mansoor. The movie stages the common most problem of the world. Population. Story gets revealed as a final message by Zainab who is to be convicted for her own father's murder.  

((Plot: Zainab is the eldest of seven sisters and a transgendered brother Saifi. Their father is a hakim(traditional medicine with declining popularity) who is an oppressive person and totally against women working. Saifi gets all the family members' love except his father's, who develops hatred towards Saifi. On an uneventful day, Saifi gets raped. His father kills Saifi and advocates that he has done the right thing for the family. In need of money to bribe police, he marries a prostitute to give birth to a baby girl again. That is when he begs her to give his daughter instead of raising her to be a prostitute. She comes to Hakim's home and hands-over the baby. Zainab, her sisters and their mother decide to leave the place because of all the problems that their father has caused. But guards of brothel come to take back the baby. Hakim tries to kill the newborn to keep her away from horrid life at brothel. Zainab kills her father and hides the baby. They say that their father killed the newborn and threw her somewhere.

Zainab who was silent all along her court trials decide to speak in front of media to let the world know about her story. She asks out loud to the media as to why is giving birth without any means to nurture them is not a crime. Upon completion of her story and a journalist's failed attempts to bring the case back to trial,Zainab is given the death penalty. Her story is telecast and the President takes it seriously and arranges a committee meeting for discussion on birth control.))

Movie has thrown light on a few fundamental beliefs. 

Hakim forgets all his self-inflicted ethics when he goes to the brothel to teach their kids Quran only for money. He then marries the prostitute to give her a child for the sake of money. Hakim stands as a personified paradox who atrociously advocates whatever he does. 

Zainab is a protagonist who questions the long held old rusted blind beliefs. She raises her voice against her father who wants a baby boy from her mother, no matter after how many kids. 

Zainab gets her mom operated for tubectomy. Her father advocates that Mohammed Paigambar has told that he wants to see Islam as the largest community of the world; Giving birth is God's creation and no one are to disrupt it.  Her reply stands as an eyeopener. She says, Paigambar means that Islam has to be the largest in its Pride, Respect and Honor, not in its population. No one can boast of highest strength if the genes themselves are undernourished and weak. Allah is a life giver. Agreed. But that doesn't mean people take his name for the uncontrolled greed of having kids.

The movie has shown how the whole society sees a transgender as a completely unacceptable person, on the contrary, the family gives all the love to Saifi and tries to raise him as a normal boy.  Helplessness of a transgender is clearly shown when he dresses like a girl, gets beaten up by his sister for it and asks her, why do I like to dress up like a girl and why do I feel like going out and getting married to a guy. How much ever you all try to treat me like a man, I am a girl from within.

This is clearly a movie for a small group of people who like issue based flicks. Nothing is very cheesy here. Only reality of a downtrodden and overpopulated family is filmed.

Try watching if you appreciate the director's effort of making a raw movie for the sake of infotainment and not meager entertainment.

Wednesday, April 9, 2014

ಮತದಾನ! ಬುದ್ಧಿದಾನ!! ವಿವೇಚನಾದಾನ!!!

(ನನ್ನನ್ನೂ ಒಳಗೊಂಡು ಎಲ್ಲ ಫೇಸ್ ಬುಕ್ಕಿಗಳಿಗೆ- ತಮ್ಮ ಮತದಾನದ ನಿರ್ಣಯವನ್ನು ಇತರರಿಗೂ ಹಂಚಲು ಹೊಂಚುವ ನಮ್ಮೆಲ್ಲರಿಗೂ ಅರ್ಪಣೆ!!!!  )

ಬಂತು ಬಂತು ಎಲೆಕ್ಷನ್ನು- ಗೆಲ್ಲಿಸಿ ನಮ್ಮದೇ ಸೆಲೆಕ್ಷನ್ನು
ಹೇರಿವೆವು ನಮ್ಮ ನಿಲುವನ್ನು- ಪಕ್ಕಕಿಡಿ ನಿಮ್ಮ ವಿಚಕ್ಷಣೆಯನ್ನು

ನಮ್ಮ ನಾಯಕ ಉತ್ತಮನು- ಇರುವರಲಿ ಸರ್ವೋತ್ತಮನು!!
ರಣಭೂಮಿಯಿಲ್ಲಿ ಸಿದ್ಧ- ಜನರ ವೋಟಿಗೆ ಬದ್ಧ
ನೀಡುತೀವಿ ಚಂದ್ರಬಿಂಬ- ಹರವಿ ನಿಮ್ಮ ಅಂಗಳದಾ ತುಂಬ


ಬದಲಾವಣೆಯ ಗಾಳಿ ಖಾತ್ರಿ- ತುಳುಕದು ತುಂಬಿಬಂದ ಪಾತ್ರಿ
ಇಂದ್ರ ಚಂದ್ರ ಎಲ್ಲ ಅವನೆ- ಅಭಿವೃದ್ಧಿಯೇ ಒಂದೇ ಸಮನೆ
ಇರಬಹುದಿದು ಬರಿ ನಮ್ಮ ಧೋರಣೆ- ಆಗಬಾರದೇಕೆ ನಿಮ್ಮ ಎಣಿಕೆಗೂ ಸ್ಫುರಣೆ?

ನಮ್ಮವ ಮಾಡಿದರೆ ಪದಗ್ರಹಣ- ಪ್ರಶಾಸನದ ತುಂಬೆಲ್ಲ ಸುಶಾಸನ
ನಮ್ಮವ ತುಳಿದರೆ ಗದ್ದುಗೆ- ಪ್ರತಿ ಕೈಗೂ ಶಕ್ತಿಯ ಸಜ್ಜಿಗೆ
ನಮ್ಮವನಾದರೆ ಪ್ರಧಾನಿ- ಭ್ರಷ್ಟಾಚಾರಕೆ ಹಿಡಿಯುವ ಸಾಣಿ

ಕುಟ್ಟುತೀವಿ ಲೈಕುಗಳನು- ಕಮೆಂಟುತೀವಿ ಸ್ಮೈಲುಗಳನು
ನಮ್ಮ ಲೈಕೆ ನಮಗೆ ಬೆಷ್ಟು- ಉಳಿದವೆಲ್ಲ ಬರಿಯ ವೇಷ್ಟು!