Tuesday, May 23, 2017

Fault In Our Stars: John Green

Hazel Grace is diagnosed with thyroid cancer who is alive because of continuous experimentation with cancer treatments and is relatively stable due to a new drug. She is mostly home-bound due to her disease. Hazel meets Augustus Waters and Isaac in cancer support group when she almost has given up on her chance of making new friends, and the trio develop a strong bond. Augustus falls in love with her as she refrains since she knows her days in life are numbered.

There are parents who like anyone whose kids’ life has an only ultimatum of timed existence are jittery and skittish over everything. The story unfolds between the depths of An Imperial Affliction (AIA) and the Price of dawn, with extreme different topics and width of coverage. Price of dawn is a Sci fi made to a video game where as AIA is a story that tells you about Anna, a little girl ridden with blood cancer who seemingly achieves remission and falls back into final stage of the disease and the story ends abruptly mid-sentence, like the way the afflicted lives end; mid-life & mid-phase without hinting that the good day you spent with them was actually their last good day.

Fault in our stars is a perfect frame story – That it actually tells a story within the story to a point where the quotes and the plot of the story within the story (An Imperial Affliction - AIA) becomes so surreal, that the reader might as well think that the “Fault in our stars” was constructed because of AIA. The nested story within seems to have a full-on grip on the lives of Hazel Grace and Augustus Waters in “Fault in our stars” since they both adore the book. Many quotes from the book are brought to life in Hazel & Gus’s conversations. Though the technique of nestled stories is not new, the prowess to the way of telling a story and using the frame story at substantiating every turn in the story is captivating.

You will find the book light-hearted at times and will compel you to feel it to the point of affecting the reader with the characters. Quotes from the novel are worth spending time to think upon. You will find the book heavy in that ways, and not just as an easy to read novel. Death is a steadfast end of life; but the series of events that lead to it is quite a stressful journey for those who know what will kill them; and for the people who take care of them, it is even more challenging.

I quite keep questioning myself, why people take care of their beloved ones during their illness, without letting them go, without letting them struggle all on their own, or just leave them to their fate. The answer is in this book. How the relationships are bonded and why they are the way they are, is very well tried and explained in it. I’m yet to watch the movie that made “Fault in our stars” come to life, but am sure everything that is felt in the book is far more vivid than the movie has to show to me. Peter Van Houten, the imaginary author of the imaginary book “An Imperial Affliction” is a character built to stay, to weigh Hazel and Gus, several notches higher is all I can say!

Wednesday, April 5, 2017

ಪೂರ್ಣಚಂದ್ರ ತೇಜಸ್ವಿ

ನಮ್ಮ ತೇಜಸ್ವಿ
ಬೆಳಗು ನಗುನಗುತ್ತಾ ಇದ್ದು ಇಳಿ ಮಧ್ಯಾಹ್ನದ ಹೊತ್ತಿಗೆ ರಪ್ಪಂತ ಕಂತೆ ಒಗಾಸಿ ಎದ್ದು ಹೋದ ಪೂರ್ಣಚಂದ್ರ ತೇಜಸ್ವಿಯವರ ನಗುಮೊಗವೇ ೧೦ ವರ್ಷವಾದ ಮೇಲೂ ಈ ದಿನ ಕಣ್ಣೀರು ತರಿಸುತ್ತೆ ಅಂದ್ರೆ ತೇಜಸ್ವಿಯವರು ಅದೆಂಥಾ ಮೋಡಿ ಮಾಡಿದೋರು ಅಂತ ಆಶ್ಚರ್ಯವಾಗುತ್ತೆ. ಪ್ರತಿಯೊಂದು ಪುಸ್ತಕವೂ ಮಾಹಿತಿಯೊಂದಿಗೆ ಬೆಸೆದ ನಂಟು - ಪ್ರೀತಿ, ಹಾಗು ಸುಮಾರು ಪುಸ್ತಕಗಳಲ್ಲಿ ತಾವೂ ಒಬ್ಬ ಪಾತ್ರವಾಗಿ ಬಂದಿರುವುದರಿಂದಲೋ, ಅಥವಾ ಮನಮುಟ್ಟುವ ಪರಿಸರದ ಕತೆಗಳನ್ನ ಹೇಳುತ್ತಾ ಅಲ್ಲಿನ ಗಿಡ ಮರ ಪಕ್ಷಿ ಪ್ರಾಣಿಗಳಿಗೆಲ್ಲಾ ವ್ಯಕ್ತಿತ್ವವೊಂದನ್ನ ಕೊಟ್ಟು ನವಿರಾಗಿ ಸಂದರ್ಭಗಳನ್ನು ಹೆಣೆಯುತ್ತಾ ಪ್ರತಿ ಪುಟದಲ್ಲೂ ನಕ್ಕು ನಗಿಸುತ್ತಿದ್ದ, ತಲ್ಲೀನಗೊಳಿಸುತ್ತಿದ್ದ ತೇಜಸ್ವಿಯ ಬರವಣಿಗೆ ಯಾವ ಓದುಗ ಮರೆತಾನು?

ಗುಂತಕಲ್ಲಿನ ಕಾಡುಗಳಲ್ಲಿನ ನರಭಕ್ಷಕ ಹುಲಿಗೆ ಈಗಲೂ ಕೆನೆತ್ ಆಂಡರ್ಸನ್ ಮಣ್ಣು ಕೊರೆದು, ಕಲ್ಲುಗಳನ್ನು ಸುತ್ತಲೂ ಹುಲಿಗೆ ಅನುಮಾನ ಬರದಂತೆ ದೂರದಿಂದ ತಂದು ಹರಡಿ ಕಾದು ಕುಳಿತಾಗ ಅವರ ಹಿಂದಿನ ಕಾಡಿನಿಂದ ಕೇಳಿಸಿದ ಗರ್ಜನೆ ಹತ್ತಿರವಾಗುತ್ತಾ ಹೋದಂತೆ ಉಗುರು ಕಚ್ಚುತ್ತ ಓದುತ್ತಿದ್ದ ಜ್ಞಾಪಕ. ಪಕ್ಷಿಯೊಂದು ಇವರೊಡನೆ ಮಾಡಿದ ಗೆಳೆತನದ ಕಾರಣವಾಗಿ ಕೊನೆಯುಸಿರೆಳೆದಾಗ ಕಣ್ಣೀರಾದ ನೆನಪು. ಚಂದ್ರನ ಮೇಲಿಳಿದ ಮಾನವನ ಕಥೆ ಹೇಳುವಾಗಲೋ, ಮಿಸ್ಸಿಂಗ್ ಲಿಂಕ್ ಗಾಗಿ ಹುಡುಕಾಟ ನಡೆಸುವಾಗ ಬೆರಗುಗೊಂಡು ಪುಸ್ತಕದಲ್ಲೇ ಇಳಿದು ಪುಸ್ತಕ ಓದಿದ್ದಲ್ಲ - ಪ್ರತಿ ಸಂಗತಿಯನ್ನೂ ನೋಡಿದ ಭಾಸ. ಅದೇ ಜುಗಾರಿ ಕ್ರಾಸ್ ನಲ್ಲಿನ ಹೇಲು ತುಂಬಿದ ಗುಂಡಿಯೊಳಕ್ಕೆ ಮೂಗು ಮುಚ್ಚಿ ಕೂರುವ ಸಂಗತಿ, ಕಿರಗೂರಿನ ಗಯ್ಯಾಳಿಗಳು ಕೆಲಸಕ್ಕೆ ಬಾರದ ಗಂಡಂದಿರನ್ನ ಬಯನೆ ಕಟ್ಟುಗಳಲ್ಲಿ ಭೂತ ಬಿಡಿಸಿದ ಸಂಗತಿ - ಓದಿ ಜೋರಾಗಿ ನಕ್ಕು, ಮನೆಯವರಿಗೆಲ್ಲ ಇವಳೇನು ಓದುತ್ತಿದ್ದಾಳೋ, ಹಾಸ್ಯದ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಳೋ ಅಂತ ಗೊಂದಲವಾಗಿದ್ದು ನೆನೆದರೆ ಈಗಲೂ ನಗು.

ಅವರ ಸುಲಭ ಬರವಣಿಗೆ ಹಾಗು ತುಂಬಾ relate ಆಗಿಸುವ ಶೈಲಿಯ ಪುಸ್ತಕಗಳಿಂದ ಎಷ್ಟೋ ಹೊಸ ಓದುಗರನ್ನು ಕನ್ನಡಕ್ಕೆ ತರುತ್ತಲೇ ಇರುವವರು ತೇಜಸ್ವಿ. ಹೆಚ್ಚೇನೂ ಹೇಳುವುದು ಇಲ್ಲ. ಯಾಕೆಂದರೆ, ಇನ್ನು ಮುಂದೂ ಓದಿಸಲಿಕ್ಕೆ ತೇಜಸ್ವಿಯವರೇ ಇಲ್ಲ. ಅವರೆಲ್ಲ ಪುಸ್ತಕಗಳನ್ನೂ ಬಿಡುವಾದಾಗ ಮತ್ತೆ ಮತ್ತೆ ಓದಿ ಖುಷಿ ಪಡೋಣ. ಈ ರೀತಿ ತೇಜಸ್ವಿಯವರು ಸದಾ ನಮ್ಮೊಂದಿಗೇ ಉಳಿಯೋದರಲ್ಲಿ ಸಂಶಯವೇ ಇಲ್ಲ.

Tuesday, February 14, 2017

ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿಯಲ್ಲ


ವ್ಯಾಲೆಂಟೈನ್ಸ್ ಡೇ ಭರಾಟೆ ನೆನ್ನೆ ತಾನೇ ಮುಗಿದಿದೆ. ಆಭರಣದಂಗಡಿಗಳು, ಆನ್ ಲೈನ್ ಶಾಪಿಂಗ್, ಕೆಫೆ ರೆಸ್ಟೋರೆಂಟ್ ಗಳೆಲ್ಲಾ ತಂತಮ್ಮ ಲಾಭಕ್ಕೆ ಫೆಬ್ರವರಿ ಪೂರ್ತಿ ಕೆಂಪು ಬಿಳಿ ಕರಿ ಬಲೂನ್ಗಳನ್ನ ಮೆರೆಸಿದ್ದೇ ಮೆರೆಸಿದ್ದು. ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿ (monitory ಪ್ರೀತಿ!) ಹಂಚಿಕೊಳ್ಳಿ ಅಂತ ಎಲ್ಲೆಲ್ಲಿ ನೋಡಿದರೂ ಜಾಹಿರಾತುಗಳು.


ಬಂಗಾರದ ಉಡುಗೊರೆಯ ಜಾಹಿರಾತು ಪದೇ ಪದೇ ಪ್ರಸಾರಗೊಳ್ಳುವಾಗ ಪ್ರತಿ ಬಾರಿಯೂ ಇಗ್ನೋರ್ ಮಾಡಿ ಹೆಂಡತಿಯೊಂದಿಗೆ ಟಿವಿಯೂ ನೋಡೋಹಾಗಿಲ್ಲ! ನೀನೇನು ತಂದೆ ಮುಂಡೇದೆ, ಅಂತ ಆಕೆ ಗಂಡನ ಮೂತಿ ತಿವಿದರೆ? ಒಬ್ಬಂಟಿಯಾಗಿ ಹೊಸ ಊರಿನಲ್ಲಿ ಗರ್ಲ್ ಫ್ರೆಂಡ್ ಇಲ್ಲದೆ ದಿನಾ ಮಜವಾಗಿರೋ ಹುಡುಗರಿಗೆ ಈ ತಿಂಗಳು ಏನೋ ಕಳಕೊಂಡ ಭಾವ! ಇನ್ಯಾರಿಗೋ ಹುಡುಗಿಯೊಬ್ಬಳ ಮೇಲೆ ಭಾರೀ ಮೋಹ. ಹೇಳಿಕೊಂಡು ಇಲ್ಲ ಅನ್ನಿಸಿಕೊಂಡರೆ ಅನ್ನೋ ಭಯ. ಈ ದಿನ ಹೇಳಿ ಅವಕಾಶವಾದಿ ಅನ್ನಿಸಿಕೊಂಡರೆ? ಅದೇ ಕಾರಣಕ್ಕೇ ಇಲ್ಲವೆಂದುಬಿಟ್ಟರೆ? ಗರ್ಲ್ ಫ್ರೆಂಡ್ ಇರುವವರಿಗೆ ಜೇಬಿಗೆ ಭಾರವಾದರೂ ಉಡುಗೊರೆ ಕೊಟ್ಟು ನಿಭಾಯಿಸಲೇ ಬೇಕಾದ ಅನಿವಾರ್ಯ- ಇವೆಲ್ಲ ಈ ವ್ಯಾಲೆಂಟೈನ್ ಡೇಯ ಅಡ್ಡ ಪರಿಣಾಮಗಳು!

ಇವಕ್ಕೆಲ್ಲಾ ನುಣುಚಿಕೊಳ್ಳುವ ಅತೀ ಸುಲಭ ವಿಧಾನ ಅಂದ್ರೆ ವ್ಯಾಲೆಂಟೈನ್ ಡೇ ಪಾಶ್ಚಿಮಾತ್ಯ ಸಂಸ್ಕೃತಿಯ ಉದ್ಘೋಷಿತ ಸ್ವರೂಪ. ನಾವು ಭಾರತೀಯರು. ಭಾರತೀಯ ಸಂಸ್ಕೃತಿಯ ಮೂಲದಲ್ಲಿಯೇ ಇಲ್ಲದ ಪ್ರೇಮಿಗಳ ದಿನ ನಮಗೇತಕ್ಕೆ? ಇದರ ಬದಲು ತಂದೆ-ತಾಯಿಯನ್ನ ಪ್ರೀತಿಸುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ. ಸ್ನೇಹಿತರಿಗೊಂದು ಥ್ಯಾಂಕ್ಸ್ ಹೇಳುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ. ಮಕ್ಕಳಿಗೊಂದು ಹೂಮುತ್ತನ್ನಿಟ್ಟು ಅವರ ಜೊತೆ ಕ್ವಾಲಿಟಿ ಸಮಯ ಕಳೆಯುವ ದಿನವಾಗಲಿ ವ್ಯಾಲೆಂಟೈನ್ ಡೇ. ಬಡವರಿಗೋ, ಅನಾಥರಿಗೋ, ಹಿಂದುಳಿದವರಿಗೋ, ಶೋಷಿತರಿಗೋ ಒಪ್ಪತ್ತು ಊಟವೋ ಬಟ್ಟೆಯೋ ಕೊಡುವ ದಿನವಾಗಲಿ ವ್ಯಾಲೆಂಟೈನ್ ಡೇ . ತಮ್ಮನ್ನು ತಾವು ಪ್ರೀತಿಸಿಕೊಳ್ಳುವ ((!)ಯಾವ ರೂಪ ಬೇಕಾದ್ರೂ ಕಲ್ಪಿಸಿಕೊಳ್ಳಿ) ದಿನವಾಗಲಿ ವ್ಯಾಲೆಂಟೈನ್ಸ್ ಡೇ.  ಉತ್ತಮ ಹವ್ಯಾಸವೊಂದನ್ನು ಪ್ರೀತಿಸುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ- ಹೀಗೆಲ್ಲಾ ಪುಂಖಾನುಪುಂಖ ಸಂವಾದ ನಡೆಸುವವರನ್ನು ಕಂಡು ಸೋಜಿಗವಾಗುತ್ತದೆ. 

ಇಲ್ಲಿನ ಯಾವ ವಾದವೂ ತಪ್ಪೆಂದು ಹೇಳುತ್ತಿಲ್ಲ. ಹೀಗೆ ಯೋಚಿಸುವ ಎಷ್ಟು ಜನ ಅವುಗಳನ್ನು ಆಚರೆಣೆಗೆ ತರುವ ಜೊತೆ, ತನ್ನ ಖಾಸಾ ಸ್ನೇಹಿತೆಗೋ, ಪ್ರೇಮಿಗೋ, ಹೆಂಡತಿಗೋ ವರ್ಷಕ್ಕೊಂದು ದಿನವಾದರೂ ಪೂರ್ಣ ಮೀಸಲಿಟ್ಟು ತಮ್ಮ ಪ್ರೀತಿ ಹೇಳಿಕೊಳ್ಳುತ್ತಾರೆ ಅಂತ ನಂಬೋಣ? ಪ್ರೀತಿಗೆಂದೇ ಪ್ರತ್ಯೇಕ ದಿನ ಬೇಕಿಲ್ಲ ಎನ್ನುವ ಎಷ್ಟು ಜನ ತಮ್ಮ ಪ್ರತಿ ದಿನವನ್ನೂ ಪ್ರೇಮಮಯವಾಗಿಟ್ಟುಕೊಳ್ಳುತ್ತಾರೆ? ವ್ಯಾಲೆಂಟೈನ್ ಡೇ ಆಚರಿಸಿಬಿಟ್ಟರೆ ದೇಶವೇ ಕೊಳ್ಳೆಹೋಗುತ್ತದೆನ್ನುವಂತೆ ಮಾತನಾಡುವುದು ಎಷ್ಟು ಉಚಿತ? ಪ್ರೀತಿ ಹೇಳಿಕೊಳ್ಳಿ, ತೋರ್ಪಡಿಸಿಕೊಳ್ಳಿ. ಯಾವದಿನವಾದರೂ ಸರಿಯೇ. ಆಮೇಲೆ ವ್ಯಾಲೆಂಟೈನ್ ಡೇ ಯ ಅವಾಶ್ಯಕತೆಯಾದರೂ ಯಾಕಿರುತ್ತೆ ಸಂಬಂಧಗಳಲ್ಲಿ? ಪ್ರೇಮಿಗಳ ದಿನವೆಂದು ಉಡುಗೊರೆ ಕೊಟ್ಟರೆ ಕೊಡಲಿ ಬಿಡಿ. ಹಾಗಾದರೂ ಮತ್ತೊಂದು ಪ್ರೀತಿಯ ಚಿನ್ಹೆ ನಂಟಿನ ಹೆಸರಲ್ಲಿ ಸೇರ್ಪಡೆಯಾದೀತಲ್ಲ. ಪ್ರೀತಿಯ ದಿನದ ನೆಪಮಾಡಿ ಒಂದು ಪೂರ್ತಿ ದಿನ ಜೊತೆ ಕಳೆಯಲಿ ಬಿಡಿ ಪ್ರೇಮಿಗಳು- ಮಕ್ಕಳು ಹೆತ್ತು ಹೋಂ ವರ್ಕ್ ಮಾಡಿಸುವುದರಲ್ಲಿ ಬೇಸತ್ತ ದಂಪತಿಗಳೋ, ಅನುದಿನವೂ ೧೨ ತಾಸು ದುಡಿದುಡಿದು ಬುದ್ಧಿ ಅಡವಿಕ್ಕುವ ಜನ ಅವತ್ತೊಂದು ರಾತ್ರಿ ನೆಮ್ಮದಿಯಾಗಿ ಜೊತೆಯಲ್ಲಿ ಕೂತು ಸಮಯ ಕಳೆಯಲಿ ಬಿಡಿ, ಕಾವ್ಯಾತ್ಮಕ ಮಾತುಗಳನ್ನು ಬರೆದೋ - ಕೊರೆದೋ ಕೊಡಲಿ ಬಿಡಿ. ಆಚರಣೆಯಲ್ಲಿ ಹೊಸತನ ತಂದು ಸ್ವಲ್ಪ ಬುದ್ಧಿ ತೀಕ್ಷ್ಣಗೊಳಿಸಿ ಕ್ರಿಯೇಟಿವ್ ಆಚರಣೆ ಮಾಡಲಿ ಬಿಡಿ. ದುಡ್ಡು ಕೊಟ್ಟು ಆಭರಣವೋ, ಬಟ್ಟೆಯೋ ಮತ್ತೊಂದೋ ಕೊಂಡುಕೊಂಡೇ ಸಂಗಾತಿಯನ್ನು ಪ್ರಸನ್ನ ಪಡಿಸಬೇಕಾದ್ದಿಲ್ಲವೇ ಇಲ್ಲ. ನಾಲ್ಕು ಸಾಲುಗಳ ಪ್ರೇಮಮಯ ಕವಿತೆಯಾದರೂ, ಮನೆಕೆಲಸ ಮಾಡುವುದರಲ್ಲಿ ಸಹಾಯ ಮಾಡಿ ಆಕೆಯನ್ನು (ಅಥವಾ ಆತನನ್ನು) ಕೂರಿಸಿ ಮಾತಾಡಿಸಿದರೂ, ಎಂದೋ ಕರೆದುಕೊಂಡು ಹೋಗಬೇಕಾದ ಸ್ಥಳಕ್ಕೆ ಭೇಟಿಯೋ (ಪಾರ್ಕ್ ನಲ್ಲೊಂದು ವಾಕ್), ಇನ್ನೂ ಹಲವಾರು ಓಲೈಕೆಯ ದಾರಿಗಳಿಂದ ಪ್ರೀತಿಯ ಆಚರಣೆ ಸಾಧ್ಯ. ಸೃಜನಶೀಲತೆ ಇದ್ದಲ್ಲಿ sky is the limit. ಆಚರಣೆ ಬೇಡ ಅನ್ನುವ ಜನವೆಲ್ಲಾ ಆಲೋಚಿಸಿಕೊಳ್ಳಿ.  ಒಟ್ಟಿನಲ್ಲಿ ಆಚರಿಸಲಾಗದ್ದಕ್ಕೆ ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿಯಲ್ಲ ಅನ್ನೋದು ನಿಂತರಾಯಿತು! ಜೀವನ ಸುಖಮಯ.

Wednesday, January 25, 2017

ಉತ್ತರಕಾಂಡ: ಎಸ್ ಎಲ್ ಭೈರಪ್ಪಪಾತ್ರ ಪರಿಶುದ್ಧತೆ ಅನ್ನುವುದು ಹಲವಾರು ಲೇಖಕರಿಗೆ ಕೈಗೆಟುಕದ್ದು; ಪಾತ್ರವೊಂದನ್ನು ಸೃಷ್ಟಿಸಿದರಷ್ಟೇ ಸಾಲದು; ಅವಕ್ಕೆ ತಮ್ಮದೇ ವ್ಯಕ್ತಿತ್ವವನ್ನೂ ಪೊರೆಯಬೇಕಾಗುತ್ತದೆ; ಪ್ರತಿಯೊಂದು ಪಾತ್ರವೂ ತನ್ನ ಗ್ರಹಿಕೆ ಹಾಗು ಪ್ರತಿಕ್ರಿಯೆಯನ್ನೂ ತಂತಮ್ಮ ಭಾವದ ನಿಲುಕಿನ ಸೂಕ್ಷ್ಮತೆಗನುಗುಣವಾಗಿ ಕಟ್ಟಿಕೊಡಬೇಕಾಗುತ್ತದೆ. ಲೇಖಕರೊಬ್ಬರು ಹಲವಾರು ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಥೆ ಸಂದರ್ಭಗಳನ್ನು ಹೆಣೆಯಬೇಕಾಗುತ್ತದೆ. ಪಾತ್ರದ ಹರವು ಲೇಖಕನ ಯೋಚನೆಗೆ ಮಿಳಿತವಾಗುತ್ತ ಎಲ್ಲಿ ಹೋಗುತ್ತದೋ ಅಲ್ಲಿ ವಸ್ತುನಿಷ್ಠತೆಯಿಂದ ಕಥೆಯ ಪಾತ್ರ ದೂರ ಸರಿಯುತ್ತ ಹೋಗುತ್ತದೆ. ಅಲ್ಲಿ ಓದುಗನ ಮನಸ್ಸಿನಲ್ಲಿ ಏಕತಾನತೆ ಅಥವಾ ಗೊಂದಲ ಮೂಡುವ ಸಾಧ್ಯತೆಯಿರುತ್ತದೆ. 

Image result for uttarakanda s l bhyrappa
ಭೈರಪ್ಪನವರು ತಮ್ಮ ಪ್ರತಿಯೊಂದು ಕಾದಂಬರಿಯಲ್ಲಿಯೂ ಈ ವಸ್ತುನಿಷ್ಠತೆಯನ್ನು ಕಾಪಾಡಿಕೊಂಡಿರುವುದರಿಂದಲೇ ಅವರ ಪುಸ್ತಕಗಳನ್ನು "ism" ಗಳಿಗಾಗಲೀ, ನಿರ್ದಿಷ್ಟ ವರ್ಗಕ್ಕಾಗಲೀ ಸೇರಿಸಲು ಬಂದಿಲ್ಲವೇನೋ. ಪ್ರತಿಯೊಂದು ಪುಸ್ತಕದಲ್ಲಿಯೂ ಪಾತ್ರಗಳು ಯೋಚಿಸುವ, ಪ್ರತಿಕ್ರಿಯಿಸುವ ರೀತಿಯೇ ವಿಭಿನ್ನ. ಉತ್ತರಕಾಂಡ ಈ ಹಿನ್ನೆಲೆಯಲ್ಲಿ ಅವರ ಹಿಂದಿನ ಎಲ್ಲ ಕಾದಂಬರಿಗಳಿಗಿಂತ ಭಿನ್ನ. ಪರ್ವದಲ್ಲಿನ ದ್ರೌಪದಿಗೂ ರಾಮಾಯಣದಲ್ಲಿನ ಸೀತೆಗೂ ಅಜಗಜಾಂತರ. ಅಲ್ಲಿನ ಮಹಾಭಾರತ ಯುದ್ಧದ ವಸ್ತುನಿಷ್ಠ ವಿಡಂಬನೆಗೂ, ಇಲ್ಲಿನ ಯುದ್ಧದ ಮೇಲು-ಮೇಲಿನ ವರ್ಣನೆಗೂ ಅಜಗಜಾಂತರ. ವಸ್ತು ಅಲ್ಲಿ ಸಂದರ್ಭಗಳಾಗಿದ್ದರೆ, ಇಲ್ಲಿ ಮುಕ್ಕಾಲು ಪಾಲು ಸೀತೆಯ ಸ್ವಗತದಲ್ಲಿರುವುದರಿಂದ ನಿರೂಪಣೆ ಹಾಗು ಅದರ ಒತ್ತು ಭಿನ್ನ.


ಒಂದೊಂದು ಪಾತ್ರಗಳಿಗೂ ಕಟ್ಟಿಕೊಟ್ಟಿರುವ ವ್ಯಕ್ತಿತ್ವ ಮೂಲ ರಾಮಾಯಣಕ್ಕೆ ಧಕ್ಕೆಯಾಗದಂತೆಯೂ ಇದ್ದು ನೈಜ ಚೌಕಟ್ಟನ್ನು ಧರಿಸಿ ಕೊಟ್ಟಿರುವ 'ಉತ್ತರಕಾಂಡ" ಮತ್ತೆ ಮತ್ತೆ ಓದಿಸಿಕೊಳ್ಳುವುದು ನಿಶ್ಚಯ. 

ಯಾವುದೊ ಸಂದರ್ಭದಲ್ಲಿ ಬದುಕಿನಿಂದಲೋ, ಪ್ರೀತಿಸುವವರಿಂದಲೋ ಅಕಾರಣ ತಿರಸ್ಕೃತರಾದಾಗ ನಡೆಯಬಹುದಾದ ಮನ ಮಂಥನ ನಾವು ಸಮಾನ ರೂಪದ ಸಂದರ್ಭಗಳನ್ನು ಎದುರಿಸುವಾಗ ಖಂಡಿತಾ ಉಪಯೋಗಕ್ಕೆ ಬಂದೀತು. ಲಕ್ಷಣನ ವ್ಯಕ್ತಿತ್ವವನ್ನು ಇಡಿಯಾಗಿ, ಘನವಾಗಿ ಕಟ್ಟಿಕೊಟ್ಟಿದ್ದಾರೆ. ಅತ್ತಿಗೆ ಮೈದುನರ ಸಂಬಂಧವನ್ನು, ಅವರ ನಡುವಿನ ಮುನಿಸಿನಲ್ಲಿ ಸಹ ತೋರಿಸಿಕೊಟ್ಟಿದ್ದಾರೆ. ಇದು ಸೀತೆಯ ರಾಮಾಯಣವಾದರೂ ರಾಮ ಇಲ್ಲಿ ಸ್ತ್ರೀ ಪೀಡಕನಲ್ಲ ; ಧರ್ಮಪಾಲನೆಯಲ್ಲಿ ಲೋಲುಪತೆ ತೋರಿಸಲಾರದ ಪರಿಸ್ಥಿತಿಗೆ ಕಟ್ಟುಬಿದ್ದು ಅತ್ಯಂತ ಪ್ರೀತಿಪಾತ್ರರಿಗೆ ಹಿಂಸೆಯಾಗುವಾಗ ತನಗರಿವಿದ್ದೂ ನಿಸ್ಸಹಾಯಕನಾಗಿಬಿಡುವಾಗಿನ ಆರ್ದ್ರತೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ರಾಮ ಸೀತೆಯರ ಅಗಲಿಕೆಯ ನೋವು, ನಂತರದ ಉತ್ತರಕಾಂಡದಲ್ಲಿ ಇಡೀ ರಾಮಾಯಣವನ್ನೇ ದೈವಿಕತೆಯ ವಿಜೃಂಭಣೆಯಿಲ್ಲದೆ ನಡೆದಿದ್ದರೆ ಹೀಗೆಯೇ ನಡೆದಿರಬೇಕೆನ್ನುವಂತೆ ಕಲ್ಪನೆಗೆ ಕಟ್ಟಿಕೊಟ್ಟಿದ್ದಾರೆ ಭೈರಪ್ಪನವರು.

ಮಹಾಭಾರತದ ಮುಂದೆ ರಾಮಾಯಣ ಚಿಕ್ಕದು. ಸಂದರ್ಭಗಳಲ್ಲಿ, ಒಳ ಕಥೆಗಳಲ್ಲಿ, ಹರವಿನಲ್ಲಿ. ೪ ಸಾಲುಗಳಲ್ಲಿಯೂ ಹೇಳಬಹುದಾದ ಕಥೆ - ರಾಮಾಯಣ. ಈಗ ಅದನ್ನೂ ಚಿಂತನೆಗೆ ಹಚ್ಚಿ ಮನಸ್ಸಿನ ತೊಳಲಾಟಗಳಿಗೆ, ಭಾವ ವಿಮರ್ಶೆಗೆ ಪಕ್ಕಾಗಿ ಅಣಿಗೊಂಡಿದೆ - ಉತ್ತರಕಾಂಡದಲ್ಲಿ. ಓದಿದ ನಂತರ ತಕ್ಷಣ ಉಳಿಯುವ ಭಾವ ಮಾತ್ರ ವಾಲ್ಮೀಕಿ ಮಹರ್ಷಿಯದ್ದೇ- "ಪಕ್ಷಿಗಳ ಅಗಲಿಕೆಗೆ ಮರುಗಿ ಮಹಾಕಾವ್ಯ ರಚಿಸ ಹೊರಟರೆ ಕಾವ್ಯದಲ್ಲೂ ರಾಮ ಸೀತೆಯರನ್ನು ಒಂದುಗೂಡಿಸಲಾಗಲಿಲ್ಲವೆಂಬ ಸ್ಥಾಯೀಭಾವ, ನಿಟ್ಟುಸಿರು, ಕಣ್ಣಂಚಲ್ಲೆರಡು ಕಂಬನಿ ಬಿಂದು.

Wednesday, January 11, 2017

Ajaya- Duryodhana's Mahabharata- By Anand Neelakantan


Mahabharata is a poetically narrated story (rather, history) of war that had happened around 6000 years ago. A story of a plethora of events leading to the war unfolds in every chapter of the epic. While Jaya is the story that tells you the winner's side of the story, Ajaya -Roll of dice and The rise of Kali - series is one of the logical most explanations of the Mahabharata war in the voice of the conquered. I had only heard of Kananda author and poet, Ranna, who had written a version of Mahabharata which is narrated as Suryodhana's story (Gadhaayuddha).

I have got to know the story of Mahabharata by bits and parts since I was in the age I could understand 10 liner stories. The beauty of the humongous epic lies in its ability to decipher itself in smaller stories. We can be told 100's of short stories which can finally be comprehended as the Jaya-Mahabharata. The more we study and research about the topic, the complex this book of epic becomes. With thousands of characters into it, Tretayuga's Mahabharata really has in it a lot to tell us, a lot to teach us, apart from the sacred text of Geeta.

In this war of Dharma, did the war really happen for the sake of Dharma or were the turn of events later termed to be the path to achieve and restore Dharma, owing to the fact that Pandavas won over Kauravas? Story can be told either ways; understood either ways. We all know Krishna to be the eternal God who's mortal life came to an end like a commoner owing to Gandhari's curse. What might have been the other side of the story?? Could the eldest of the Kaurava clan, Suyodhana been a good ruler after all? What if the downfall of the empire became more evident only because of the foolish decisions taken and wrong stances, rather than the Kauravas branded to the demonic evils?

If you have read Mahabharata, you might have wondered why Karna was killed when unarmed, why Drona was killed with a lie and then slayed while in meditating posture, why was Jayadratha killed with the illusion of fall of dusk? Why was Pitamaha Bhishma killed with Shikhandi as an armour, knowing that he would not fight with women or eunuch? Why was Ekalavya killed at all by Krishna? Why did Iravan, naga son of Arjuna die? How can the dying of a woman with her 5 sons in Varanavrata be justified as aapaddharma? How can the killing of nagas like worms in Khandivaprastha through agni be justified as it had medicinal herbs for agni to consume since he had indigestion due to yaaga?

This book tries to answer what might have happened during the period. If you have read the story of Mahabharata already, please do read this one also, to get a different perspective. Anand Neelkanthan doesn't bore you anywhere in the book. The story is woven in such a way that the loose ends in the epic of Mahabharata seem to have tied till the author's efforts and creativity permit. This you can enjoy the most while reading the book. It is a welcome try at deciphering the actual events; trying to reason with what might have happened.

Since research on Mahabharata has left us with solid reasons, places and monuments - sunken Dwaraka, radioactivity of Kurukshetra, and temples of various Mahabharata characters within India and beyond, what really might have led to the war is always a wild guess to think. Here's a nice try from Anand Neelkanthan worth reading and a subject to mull over for days later.

Tuesday, November 22, 2016

Voodooed Affection

How hapless is my love
You shove away my feelings
And I still love you,
You drown my dwindling hope
And I still love you,
You push me to grey that awaits to envelope me
And I still love you,
Every time you settle a score unfair
That makes me cry in despair
Love is what multiplies within,
Like it could be born out of even rage,
Single handedly I wrestle with expectations
And love is born of each combat within;
How hapless is my love towards you,
Like I feel a chuckle from within that taunts me
And repeats, challenging me, 'I still love!'

Thursday, October 20, 2016

One Indian Girl: Chetan Bhagat

How does the Indian society perceive a girl who comes from a middle-class family with small dreams, is more than well-educated that most majority of her peers and relatives, and earns a bomb? What are the personal issues that she faces that comes along with her education and high profile career? What are the marriage woes that she faces and how does she face the issue of having a family?

In painting this story, Chetan Bhagat has banged feminism head on to the closed walls of the novel. There is no solid base of feministic character provided at all for the person in main role, Radhika, despite Radhika uttering feminism so many times. A socially shy person, more because of her wheatish complexion in a Punjabi family with a milky-fair sibling with a sense of style. Yes she is educated-she worked tight-lipped to achieve the luscious niche team of a prestigious MNC. That becomes the way she studied, and strictly displays no portrait of a strong feminist in her, either in her thoughts during college days of when she started to work. She is a normal working girl with dreams to achieve more every day, who loves her job, cooks minimal and who wants the attention of who she likes. But at the same time, she is taken aback when her superiors compliment her on work.
Radhika falls without any analysis, for the first guy who sort of gives her attention in abroad and the relation turns sore. To forget the first one, she moves to a different continent and falls for a married man owing to his looks, mostly. However natural it may sound for a girl to have more than one relationship, both the scenarios doesn’t seem quite enough for a highly educated girl who thinks of feminism to fall for. And she only weighs her future once she can’t take the relationship casual anymore and secretly craves for a normal family life.

Yes the novel is like all other novels he has written and the storytelling makes you read the whole book in one go. With the added luscious factors that she falls in love multiple times, craves hard for a male compliment, and there are expected twists in the story, readers are bound to complete the novel out of interest. Set all analysis apart while you read this book. I do not tell that there are no flaws in the making of this book. Radhika should have had a stronger character that matches her education and theory, the novel should have been more insightful regarding each character. Because the story is narrated from the girl’s perspective, there is no much light on the other characters, which make the reader feel the reasoning in the novel insufficient. Moreover, Radhika goes on a long feminism, bird-wings-nest talk at the end of the story to a length which the reader feels is not required.

But the book is readable from start to end and is still a good read for all youngsters and older people with a young mind. Though the reader cannot be carried over completely, this story of successful Indian girl is worth the read. Had a great feeling just to be reading the storyteller who made the whole India read, yet again. 

Sunday, October 16, 2016

ನೀರ್ ದೋಸೆ :ಇಷ್ಟ್ ದಿನ ಆದ್ಮೇಲೆ ಮತ್ತೊಂದ್ ವಿಮರ್ಶೆ

Disclaimer: ಇಷ್ಟ್ ದಿನ ಆದ್ಮೇಲೆ ಈಗ್ಯಾಕೆ ನೋಡ್ಬೇಕನ್ನಿಸ್ತೋ ಗೊತ್ತಿಲ್ಲ. ಬಿಡುಗಡೆಯಾಗಿ ೬ವಾರ ಆದ್ಮೇಲೂ ಚಿತ್ರಮಂದಿರದ ತುಂಬಾ ಜನ ನೋಡಿ ಖುಷಿಯಾಯ್ತು. ನೋಡಿದೋರೆಲ್ಲ ಫೇಸ್ ಬುಕ್ಕಲ್ಲಿ "ನೋಡಿ. ಮಿಸ್ ಮಾಡ್ಬೇಡಿ" ಅಂತ ಹೇಳಿದ್ದು ಓದಿಯೇ ಹೋದ್ವೇನೋ. ಹುಡುಗಿಯೊಬ್ಬಳು ಐಟಂ ಸಾಂಗ್ ಥರ ಎಂಟರ್ಟೈನಿಂಗ್ ಸಂಭಾಷಣೆಗಳ ಸಿನಿಮಾ ಒಂದರ ವಿಮರ್ಶೆ ಬರೀತಿದ್ದಾಳೆಂದ ಮಾತ್ರಕ್ಕೇ ತಾವು ಪೂರ್ವಗ್ರಹಿಕೆ ಇಟ್ಟುಕೊಂಡು ನನ್ನ ಅಭಿಪ್ರಾಯ ಓದುವ ಅವಶ್ಯಕತೆಯಿಲ್ಲ ಅಷ್ಟೇ.  

2016 Kannada film Neer Dose poster.jpgನೀರ್ ದೋಸೆನೋ ಮಸಾಲ್ ದೋಸೆನೋ ಅಂತ ಟೈಟ್ಲೆ ಕನ್ಫ್ಯೂಸ್ ಆಗೋ ಮಟ್ಟಿಗಿನ ಸಂಭಾಷಣೆ. ಓಪನಿಂಗ್ ದೃಶ್ಯಗಳಲ್ಲೇ ಪಕ್ಕಾ ದ್ವಂಧ್ವಾರ್ಥಗಳು. ಆದ್ರೆ ದತ್ತಣ್ಣ-ಜಗ್ಗೇಶ್ ಸಿನಿಮಾ ನೋಡ್ತಾ ಹೋದಹಾಗೆಲ್ಲಾ ಇಷ್ಟವಾಗ್ತಾ ಹೋಗ್ತಾರೆ. "ಸಪೂರ ಕಟಿ" ನೋಡ್ತಾ ಇದ್ಯಾಕಿಂಥಾ ಪಾತ್ರಕ್ಕೆ ಹರಿಪ್ರಿಯಾ ಒಪ್ಪಿದ್ರೋ ಅನ್ನಿಸುತ್ತೋ, ಅದೇ ಪಾತ್ರದ ಪ್ರಾಮುಖ್ಯ ಮುಂದೆ ಅರಿವಾಗ್ತಾ ಹೋಗ್ತದೆ. ಸಾಧಾರಣ ಜನರನ್ನ ನೀರ್ ದೋಸೆಯ ಎಳೆಯಿಂದ ಕಟ್ಟಿಕೊಟ್ಟಿರುವ ಚಿತ್ರ ಇದು. ಎಷ್ಟು ನಗಿಸುತ್ತೋ ಅಷ್ಟೇ ಒತ್ತರಿಸುವ ಫೀಲ್ ತರುವ ನಾಲ್ಕಾದರೂ ಸಂದರ್ಭಗಳು. ದತ್ತಣ್ಣ ತನ್ನ ಅಕ್ಕನನ್ನು ನೆನೆಸಿಕೊಳ್ಳುವ, ಅರ್ಥಮಾಡಿಕೊಂಡಿರುವ, ಕರ್ಮಗಳನ್ನು ನೆರವೇರಿಸುವ ಪರಿ-touchy ಮತ್ತು ಅರ್ಥಪೂರ್ಣ. ಜಗ್ಗೇಶ್ ಗೆ ತನ್ನ ತಂದೆಯೊಡನಿರುವ ಭಾವದ ನಂಟೂ ತಂದೆ-ಮಗನ ಮಧ್ಯೆ ಅಪರೂಪದ್ದು. ತಂದೆಯ ಪುಟ್ಟಪುಟ್ಟ ಆಸೆಗಳನ್ನೂ ಮರೆಯದೆ ನೆಮ್ಮದಿಯಾಗಿ ಕೊನೆ ಕ್ಷಣಗಳನ್ನು ಕಳೆವಂತೆ ಮಾಡುವುದು, ಕ್ಯಾಬರೆ ಡ್ಯಾನ್ಸರ್ ಹರಿಪ್ರಿಯಾಳ ಗತವನ್ನು ಕೆದಕದೆ ಆ ಸ್ವೇಚ್ಛೆಯ ಪಾತ್ರಕ್ಕೂ ನೀಡಿರುವ ಮಾನವೀಯ ಮೆರುಗು, ಮೂಲಾ ನಕ್ಷತ್ರದಲ್ಲಿ ಹುಟ್ಟಿ ಮೂವತ್ತಾರಾದರೂ ಮದುವೆಯಾಗದೆ ಉಳಿದು ಜಗ್ಗೇಶ್ ನನ್ನು ಇಷ್ಟಪಡುವ ಸುಮನ್ ಹಾಗು ಏನೇ ಆದರೂ ಹೆಣದ ಗಾಡಿಯ ಚಾಲಕನಿಗೆ ಮದುವೆ ಮಾಡಲಿಚ್ಛಿಸದೆ ಜಗ್ಗೇಶ್-ಹರಿಪ್ರಿಯಾ-ದತ್ತಣ್ಣನ ಗುಂಪು ಕಂಡು ಗಲಿಬಿಲಿಯಾಗಿ ಹೌಹಾರುವ ಅವಳ ಅಪ್ಪ - ಎಲ್ಲವೂ ಸರಳ ಸಂಬಂಧಗಳ ಜಟಿಲ ವ್ಯಕ್ತಿತ್ವಗಳಿಂದೇರ್ಪಡುವ ನವಿರು ಹಾಸ್ಯದ ಕಥೆ-ಅಗತ್ಯ ದ್ವಂದ್ವ ಸಂಭಾಷಣೆ. ಕಳೆದು ಹೋಗ್ತಿರೋ ಮಾನವೀಯ ಸಂಬಂಧಗಳನ್ನ, ಬದುಕಿನಲ್ಲಿ ಹತ್ತಿರವಾಗುವ ಜನಗಳನ್ನ ಹೇಗೆ ಸಹಜವೆನ್ನುವಂತೆ, ಸಂಬಂಧಗಳ ಮೌಲ್ಯ ಹಾಸ್ಯದಲ್ಲೂ ಉಳಿಸಿಕೊಂಡು ಬದುಕೋ ಸರಳತೆ ತೋರಿಸಿಕೊಡೋ ಸಿನಿಮಾ ಇದು.

ಕಥೆಯ ಓಘ ಒಂದೇ ಸಮನಾಗಿಲ್ಲ. ಕೆಲವು ಕಡೆ ಅನಾವಶ್ಯಕವೆನ್ನಿಸುವಷ್ಟು ಉದ್ದದ ದೃಶ್ಯಗಳು. ಆದರೆ ಎಲ್ಲಕಡೆಯೂ ಸಿನಿಮಾ ಪ್ರೇಕ್ಷಕರ ಆಸಕ್ತಿ ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ನಿರೂಪಣೆಯೇ ಈ ಚಿತ್ರದ ಬಂಡವಾಳ. ಅಲ್ಲಿಗೆ ಕಥೆಯ ಪೂರ್ಣ ಹೆಚ್ಚುಗಾರಿಕೆ ವಿಜಯ ಪ್ರಸಾದ್ ಗೇ ಸಲ್ಲಬೇಕು. ದತ್ತಣ್ಣ ಅಂತೂ ಸಿಂಪ್ಲಿ ಸುಪರ್ಬ್. ಕಲಾವಿದರೆಲ್ಲರೂ ತಂತಮ್ಮ ಪಾತ್ರಗಳಲ್ಲಿ ಛಾಪೊತ್ತುತ್ತಾರೆ.

ಕೊನೆಗಂತೂ ನೀರ್ ದೋಸೆ ನೋಡಿದೋರ್ಯಾರಿಗೂ ಸಿನಿಮಾ ನಿರಾಸೆ ಅಂತೂ ಮಾಡೋದಿಲ್ಲ. ಮುಜುಗರ ತರಿಸುವ ಸಂಭಾಷಣೆಗಳೆಲ್ಲಾ ಕೊನೆಕೊನೆಗೆ ಇವು ಈ ಸಿನಿಮಾಗೆ ಅವಶ್ಯಕ ಅನ್ನಿಸುವಂಥಾ ಚಿತ್ರ. ನನ್ನ ಹಾಗೆ A ಸಂಭಾಷಣೆಗಳು ಅನ್ನುವ ಕಾರಣಕ್ಕೇ ಇನ್ನೂ ನೋಡದಿರೋ ಮಂದಿ ಇದ್ರೆ, ಆದಷ್ಟ್ ಬೇಗ ನೋಡಿ ಬನ್ನಿ. ಶುರುವಿನಲ್ಲಿ ಅತಿರೇಕ ಅನ್ನಿಸಿದರೂ ಸಿನಿಮಾ ಇಷ್ಟವಾಗದಿರಲು ಕಷ್ಟಸಾಧ್ಯ.

Thursday, September 29, 2016

Pink:Movie Review

It takes a nerve to make a movie which exactly represents the life of this generation. Major cities have been income magnets to attract a majority of learned women into them. Either due to lack of opportunity or due to lucrative income and scope of work, educated women land up in larger cities. And they mingle with everyone with an open mind and adjust to new lives with new compromises, and new routines, scaling their necessities up and down.
This movie is an eye-opener for people with prejudices for women. Also a representative of how uncalculated risks can go sore. Knowingly or unknowingly, many of us in Indian society very soon brand women by their social appearance and behaviour. We hold up so-called "Values" and brandish the rules against women quickly to demean them and to make conclusive opinions about them.
The ladies in this movie get caught in an assault case. Pink is more about how they tackle the situation, more than how they tackle the case. While we all expect the final verdict to be made, the way in which Amitabh Bachchan handles the case and argues is a worth watch. And of course, you will get to know that self-defense is a valid and a must to do when in distress.
The narrative is captivating and the screenplay. Kudos to Aniruddha Roy Chowdhury, writer Ritesh Shah and the team to have made a movie which is a must watch by not just pinks, but also mustached blues. Bottomline is, "It's a no when a girl tells a no. Try to persuade, and you rot beneath your own soul; be it anyone. A stranger, a friend, girlfriend or be it your own wife".